gokak

ನುಡಿದಂತೆ ನಡೆದ ಸಚಿವ ಸತೀಶ್ ಜಾರಕಿಹೊಳಿ: ಶಿಗ್ಗಾಂವಿ ದರ್ಗಾ ಅಭಿವೃದ್ಧಿಗೆ 5 ಕೋಟಿ ಅನುದಾನ, ಧರ್ಮಗುರುಗಳಿಂದ ಸನ್ಮಾನ!

Share

• ಮಾತು ಉಳಿಸಿಕೊಂಡ ಸಚಿವ ಸತೀಶ್ ಜಾರಕಿಹೊಳಿ
• ಶಿಗ್ಗಾಂವಿ ದರ್ಗಾ ರಸ್ತೆಗೆ 5 ಕೋಟಿ ಅನುದಾನ
• ಜಾರಕಿಹೊಳಿಗೆ ಧರ್ಮಗುರುಗಳಿಂದ ವಿಶೇಷ ಆಶೀರ್ವಾದ
• ಸತೀಶ್ ಜಾರಕಿಹೊಳಿ ಉನ್ನತ ಸ್ಥಾನಕ್ಕೇರಲೆಂದು ಪ್ರಾರ್ಥನೆ

ಅಭಿವೃದ್ಧಿ ಹರಿಕಾರ, ಸಚಿವ ಸತೀಶ್ ಜಾರಕಿಹೊಳಿ ಶಿಗ್ಗಾಂವಿ ಜನತೆಗೆ ನೀಡಿದ್ದ ಮಾತನ್ನು ಈಡೇರಿಸಿದ್ದಾರೆ. ಉಪಚುನಾವಣೆ ವೇಳೆ ಹಜರತ್ ಷಾ ಖಾದ್ರಿ ದರ್ಗಾ ರಸ್ತೆಗೆ ನೀಡಿದ್ದ ಭರವಸೆಯಂತೆ 5 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಶಿಗ್ಗಾಂವಿ ಕ್ಷೇತ್ರದ ಸಯ್ಯದ ಹಜರತ್ ಷಾ ಖಾದ್ರಿ ದರ್ಗಾದ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂಪಾಯಿ ಅನುದಾನ ನೀಡಿ ನುಡಿದಂತೆ ನಡೆದಿದ್ದಾರೆ. ಗೋಕಾಕಿನ ಹಿಲ್ ಗಾರ್ಡನ್ ಕಚೇರಿಯಲ್ಲಿ ಇಂದು ಹೆಸ್ಕಾಂ ಅಧ್ಯಕ್ಷ ಅಝಂಪೀರ್ ಖಾದ್ರಿ ನೇತೃತ್ವದಲ್ಲಿ ಆಗಮಿಸಿದ ಶಿಗ್ಗಾಂವಿ ಮುಸ್ಲಿಂ ಸಮುದಾಯದ ಧರ್ಮಗುರುಗಳು, ಸಚಿವರನ್ನು ಭೇಟಿಯಾಗಿ ಆಶೀರ್ವದಿಸಿ ಕೃತಜ್ಞತೆ ಸಲ್ಲಿಸಿದರು.

ಹೆಸ್ಕಾಂ ಅಧ್ಯಕ್ಷ ಅಝಂಪೀರ್ ಖಾದ್ರಿ ಅವರು, ಇದು ಭಾವೈಕ್ಯತೆಯ ಸ್ಥಳವಾಗಿದ್ದು, ಧರ್ಮಗುರುಗಳು ಇಂದು ಆರ್ಶೀವಾದವನ್ನು ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಶಿಗ್ಗಾಂವ ಉಪಚುನಾವಣೆಯ ವೇಳೆ ದರ್ಗಾಕ್ಕೆ ಭೇಟಿ ನೀಡಿದಾಗ ರಸ್ತೆ ನಿರ್ಮಿಸಿ ಕೊಡುವುದಾಗಿ ನೀಡಿದ ಮಾತನ್ನು ಪೂರ್ಣಗೊಳಿಸಿ 5 ಕೋಟಿ ಅನುದಾನವನ್ನು ನೀಡಿದ್ದಾರೆ. ಅವರನ್ನು ಭೇಟಿಯಾಗಿ ಅವರಿಗೆ ಆರ್ಶೀವಾದವನ್ನು ನೀಡಿ ಗುರುಗಳು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ದೂರದೃಷ್ಠಿಯುಳ್ಳ ಸಚಿವ ಸತೀಶ್ ಜಾರಕಿಹೊಳಿ ಅವರು ಸರ್ವ ಜನಾಂಗದ ನಾಯಕರಾಗಿದ್ದು, ಅವರ ನಾಯಕತ್ವ ಈ ರಾಜ್ಯಕ್ಕೆ ಅತ್ಯಂತ ಅವಶ್ಯಕವಾಗಿದೆ ಎಂದರು.

Tags:

error: Content is protected !!