• ಕಪಿಲತೀರ್ಥ ಕೆರೆ ಅಭಿವೃದ್ಧಿಗೆ ಆಗ್ರಹ
• ಗೋಡ್ಸೆ ಕುಟುಂಬದಿಂದ ಮನವಿ
• ಶುಭಂ ಶೆಳಕೆ ನೇತೃತ್ವದಲ್ಲಿ ನಿಯೋಗ
• ದುರಂತ ತಡೆಗೆ ಹಸ್ತಾಂತರ ಅನಿವಾರ್ಯ
ಬೆಳಗಾವಿಯ ಕಪಿಲತೀರ್ಥ ಕೆರೆಯ ಆವರಣದಲ್ಲಿ ಇತ್ತೀಚೆಗೆ ಗೋಡೆ ಕುಸಿದು ಇಬ್ಬರು ಬಾಲಕರು ಮೃತಪಟ್ಟ ಘಟನೆ ಇಡೀ ನಗರವನ್ನು ಬೆಚ್ಚಿಬೀಳಿಸಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸ್ಥಳೀಯರು ಹಾಗೂ ಭೂಮಾಲೀಕರು, ಕೆರೆಯನ್ನು ಕೂಡಲೇ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿ ಅಭಿವೃದ್ಧಿಪಡಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಬೆಳಗಾವಿ ನಗರದ ಕಪಿಲತೀರ್ಥ ಕೆರೆಯ ಆವರಣದಲ್ಲಿ ಸಂಭವಿಸಿದ ಗೋಡೆ ಕುಸಿತದ ದುರಂತವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಕೂಡಲೇ ಕೆರೆಯನ್ನು ಮಹಾನಗರ ಪಾಲಿಕೆಯ ವಶಕ್ಕೆ ಪಡೆದು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು ಎಂದು ಭೂಮಾಲೀಕರಾದ ಗೋಡ್ಸೆ ಕುಟುಂಬ ಹಾಗೂ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ. ಇಂದು ಮಂಗಳವಾರ ಬೆಳಿಗ್ಗೆ ಪ್ರಾದೇಶಿಕ ಆಯುಕ್ತರಾದ ಕೆ.ಎಂ. ಜಾನಕಿ ಅವರನ್ನು ಭೇಟಿಯಾದ ನಿಯೋಗವು, ಕೆರೆಯ ಮಾಲೀಕತ್ವ ಹಸ್ತಾಂತರ ಪ್ರಕ್ರಿಯೆಯನ್ನು ತುರ್ತಾಗಿ ಪೂರ್ಣಗೊಳಿಸಿ ಮುಂದಿನ ಅನಾಹುತಗಳನ್ನು ತಪ್ಪಿಸಬೇಕು ಎಂದು ಮನವಿ ಸಲ್ಲಿಸಿದರು. ಬೈಟ್
ಮಹಾರಾಷ್ಟ್ರ ಏಕೀಕರಣ ಯುವ ಸಮಿತಿಯ ನಾಯಕ ಶುಭಂ ಶೆಳಕೆ ನೇತೃತ್ವದಲ್ಲಿ ನಡೆದ ಈ ಭೇಟಿಯ ಸಂದರ್ಭದಲ್ಲಿ, ಕೆರೆಯ ದುರಂತಕ್ಕೆ ಕಾರಣವಾದ ಅಂಶಗಳನ್ನು ಆಯುಕ್ತರ ಗಮನಕ್ಕೆ ತರಲಾಯಿತು. ಗೋಡ್ಸೆ ಕುಟುಂಬ ಮತ್ತು ಪಾಲಿಕೆಯ ನಡುವಿನ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗುತ್ತಿರುವುದೇ ಇಂತಹ ಘಟನೆಗಳಿಗೆ ದಾರಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ನಿಯೋಗವು, ಶೀಘ್ರ ಕ್ರಮಕ್ಕೆ ಆಗ್ರಹಿಸಿತು. ಬೈಟ್
ಮನವಿ ಸ್ವೀಕರಿಸಿದ ಪ್ರಾದೇಶಿಕ ಆಯುಕ್ತರು, ಈ ಕುರಿತು ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ವಿಕಾಸ್ ಕಲಘಟಗಿ, ಕಪಿಲ್ ಭೋಸಲೆ ಹಾಗೂ ಸುತ್ತಮುತ್ತಲಿನ ನಿವಾಸಿಗಳು ಉಪಸ್ಥಿತರಿದ್ದರು.

