• ಕಂಗ್ರಾಳಿ ಬುದ್ರುಕ್ ಗ್ರಾಮಕ್ಕೆ ಭೇಟಿ
• ಶ್ರೀ ಮಹಾಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಕೆ
• ಲೋಕಕಲ್ಯಾಣಕ್ಕಾಗಿ ದೇವಿಗೆ ಹರಕೆ
• ಕಿರಣ್ ಜಾಧವ್ ಅವರಿಗೆ ಗೌರವ ಸನ್ಮಾನ

ಬೆಳಗಾವಿಯ ಸಕಲ ಮರಾಠಾ ಸಮಾಜದ ಪ್ರಮುಖ ನಾಯಕರು ಹಾಗೂ ಬಿಜೆಪಿ ಯುವ ಮುಖಂಡರಾದ ಕಿರಣ್ ಜಾಧವ್ ಅವರು ಇಂದು ಕಂಗ್ರಾಳಿ ಬುದ್ರುಕ್ ಗ್ರಾಮದ ಪ್ರಸಿದ್ಧ ಶ್ರೀ ಮಹಾಲಕ್ಷ್ಮಿ ದೇವಿಯ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಾಡಿನ ಸುಭಿಕ್ಷೆ ಹಾಗೂ ಜನರ ಕಲ್ಯಾಣಕ್ಕಾಗಿ ಅವರು ದೇವಿಯಲ್ಲಿ ಮೊರೆ ಇಟ್ಟಿದ್ದಾರೆ.
ಬಿಜೆಪಿ ಯುವ ನಾಯಕ ಕಿರಣ್ ಜಾಧವ್ ಅವರು ಇಂದು ಶ್ರೀ ಮಹಾಲಕ್ಷ್ಮಿ ದೇವಿಯ ದರ್ಶನ ಪಡೆದು, ದೇವಿಗೆ ಕಾಯಿ-ಹಣ್ಣು ಹಾಗೂ ಉಡಿ ತುಂಬುವ ಮೂಲಕ ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಲೋಕಕಲ್ಯಾಣಕ್ಕಾಗಿ ಹಾಗೂ ಸಮಾಜದ ಪ್ರತಿಯೊಬ್ಬರೂ ಸುಖ, ಶಾಂತಿ ಮತ್ತು ನೆಮ್ಮದಿಯಿಂದ ಬಾಳಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದ್ದೇನೆ. ಸಮಾಜದಲ್ಲಿನ ಅನಿಷ್ಟ ಶಕ್ತಿಗಳು ನಾಶವಾಗಿ, ವಿಶೇಷವಾಗಿ ಅನ್ನದಾತ ರೈತರಿಗೆ ದೇವಿಯು ಒಳ್ಳೆಯದನ್ನು ಮಾಡಲಿ” ಎಂದು ಆಶಿಸಿದರು. ಇದೇ ವೇಳೆ ಶ್ರೀ ಮಹಾಲಕ್ಷ್ಮಿ ಜಾತ್ರಾ ಕಮಿಟಿಯ ಅಧ್ಯಕ್ಷರಾದ ಜಯರಾಮ್ ಪಾಟೀಲ್ ಹಾಗೂ ಪದಾಧಿಕಾರಿಗಳು ಕಿರಣ್ ಜಾಧವ್ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸಕಲ ಮರಾಠಾ ಸಮಾಜದ ಕಾರ್ಯಕರ್ತರು ಹಾಗೂ ಕಿರಣ್ ಜಾಧವ್ ಮಿತ್ರಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
