BELAGAVI

ಬೆಳಗಾವಿ ಮಹಾನಗರ ಪಾಲಿಕೆಗೆ ಮುತ್ತಿಗೆ ಯತ್ನ: ಪೊಲೀಸರೊಂದಿಗೆ ಕನ್ನಡ ಹೋರಾಟಗಾರರ ತಳ್ಳಾಟ, ವಾಟಾಳ್ ನಾಗರಾಜ್ ಮತ್ತು ಕಾರ್ಯಕರ್ತರು ಪೊಲೀಸರ ವಶ!

Share

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಗಡಿ ನಿರ್ಣಯ ಪಾಸ್ ಮಾಡಲು ಆಗ್ರಹಿಸಿ ಇಂದು ಬೆಳಗಾವಿಯಲ್ಲಿ ಕನ್ನಡಪರ ಸಂಘಟನೆಗಳು ನಡೆಸಿದ ಬೃಹತ್ ಪ್ರತಿಭಟನೆ ಉಗ್ರರೂಪ ಪಡೆದುಕೊಂಡಿದೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪಾಲಿಕೆಗೆ ಮುತ್ತಿಗೆ ಹಾಕಲು ತೆರಳುತ್ತಿದ್ದ ನೂರಾರು ಹೋರಾಟಗಾರರನ್ನು ಆರ್.ಟಿ.ಓ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪೊಲೀಸರು ತಡೆದು ವಶಕ್ಕೆ ಪಡೆದ ಘಟನೆ ನಡೆಯಿತು.

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಗಡಿ ವಿವಾದದಲ್ಲಿ ಮಹಾಜನ ವರದಿಗೆ ಅಂತಿಮ ಎಂಬ ನಿರ್ಣಯವನ್ನು ಮಹಾನಗರ ಪಾಲಿಕೆ ಪಾಸು ಮಾಡಬೇಕೆಂದು ಒತ್ತಾಯಿಸಿ ಇಂದು ಬೆಳಗಾವಿಯಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಬೆಳಗಾವಿ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದವರು. ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಯಿತು. ಮೆರವಣಿಗೆಯಲ್ಲಿ ನೂರಾರು ಕನ್ನಡಪರ ಹೋರಾಟಗಾರರು ಘೋಷಣೆಗಳನ್ನು ಕೂಗುತ್ತ ಭಾಗಿಯಾಗಿದ್ಧರು.

ಪ್ರತಿಭಟನಾ ಮೆರವಣಿಗೆಯೂ ನಗರ ಆರ್.ಟಿ.ಓ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ತಲುಪುತ್ತಿದ್ದಂತೆ ತೀವ್ರಗೊಂಡ ಹಿನ್ನೆಲೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಮಹಿಳೆಯರು ರಸ್ತೆಯ ಮೇಲೆ ಮಲಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಪೊಲೀಸರು ಕೆಲ ಕಾರ್ಯಕರ್ತರನ್ನು ವಶಕ್ಕೆ ಪಡೆಯಬೇಕಾಯಿತು.

ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್ ಅವರು, ಬೆಳಗಾವಿಯಲ್ಲಿ ಪೊಲೀಸರು ಕನ್ನಡಿಗರ ಮೇಲೆ ದಬ್ಬಾಳಿಕೆಯನ್ನು ನಡೆಸಲಾಗುತ್ತಿದೆ. ಕನ್ನಡಪರ ಹೋರಾಟಗಾರರು ಅತ್ಯಂತ ಶಾಂತಿಯುತವಾಗಿ ಬೆಳಗಾವಿ ಮಹಾನಗರ ಪಾಲಿಕೆಯೆಡೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸುತ್ತಿರುವಾಗ ವಿನಾಃಕಾರಣ ತಡೆದು, ಕಾರ್ಯಕರ್ತರನ್ನು ವಶಕ್ಕೆ ಪಡೆದು ಹಿಂಸೆ ನೀಡಿದ್ದಾರೆ. ಇದು ಹಿಟ್ಲರ್’ಶಾಹಿ ಅಲ್ಲ. ಇದರ ಸಮಗ್ರ ತನಿಖೆಯನ್ನು ಮುಖ್ಯಮಂತ್ರಿಗಳು ನಡೆಸಬೇಕು. ಕನ್ನಡಿಗರಿಗಾಗಿ ಮತ್ತು ಬೆಳಗಾವಿಗಾಗಿ ಹೋರಾಟ ನಡೆಸುತ್ತಿರುವಾಗ ಎಳೆದುಕೊಂಡು ಹೋಗಿರುವುದು ಅತ್ಯಂತ ಖಂಡನೀಯ ಎಂದರು.

Tags:

error: Content is protected !!