Law

ಎಂಟು ಪೊಲೀಸ್ ಠಾಣೆಗಳ ಬಗ್ಗೆ ಒಂದೇ ತರಹದ ಪತ್ರ ಬರೆದು ಸೋಷಿಯಲ್ ಮೀಡಿಯಾದಲ್ಲಿ ವೈರಲ್; ಎಸ್ಪಿ ಲಕ್ಷ್ಮಣ ನಿಂಬರಗಿ

Share

ಯಾರೋ ಕಿಡಿಗೇಡಿಗಳು ಪಿಡಿಎಫ್ ಪೇಪರ್ ವೈರಲ್ ಮಾಡಿದ್ದಾರೆ ಎಂದು ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು. ವಿಜಯಪುರ ನಗರದಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಪಿಡಿಎಫ್ ಪೇಪರ್ ವೈಲರ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಯಾರೋ ಕಿಡಿಗೇಡಿಗಳು ಪಿಡಿಎಫ್ ಪೇಪರ್ ವೈರಲ್ ಮಾಡಿದ್ದಾರೆ. ಎಂಟು ಪೊಲೀಸ್ ಠಾಣೆಗಳ ಬಗ್ಗೆ ಒಂದೇ ತರಹದ ಪತ್ರ ಬರೆದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ ಎಂದು ಸ್ಪಷ್ಟ ಪಡಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ‌. ಪೊಲೀಸ್‌ರ ಮೇಲೆ ಅಭಿಮಾನ, ಪ್ರೀತಿ ಇಟ್ಕೊಂಡು ಕಿಡಿಗೇಡಿಗಳು ಹೀಗೆ ಮಾಡಿದ್ದಾರೆ ಎಂದರು.

ಇನ್ನೂ ಈ ಕೃತ್ಯ ಮಾಡಿದವರನನ್ನು ನಾವು ಪತ್ತೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ಪೊಲೀಸ್ ಅಧಿಕಾರಿಗಳಿಂದ ಕಿರುಕುಳ ಇದ್ರೇ ಪೊಲೀಸ್ ಸಿಬ್ಬಂದಿಗಳು ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಿಳಿಸಿದರು.

Tags:

error: Content is protected !!