karnataka

ಮೂರು ಅಪರಾಧ ಕಾನೂನುಗಳು ಜಾರಿ | ಕೆಲಸ ಸುಗಮಕ್ಕೆ ತಂತ್ರಾಂಶ ಅಭಿವೃದ್ದಿ : ಗೃಹ ಸಚಿವ ಜಿ ಪರಮೇಶ್ವರ

Share

ಮೂರು ಅಪರಾಧ ಹೊಸ ಕಾನೂನುಗಳು ಇಂದಿನಿಂದ ಜಾರಿಯಾಗಿದೆ. ಇದನ್ನು ಜಾರಿಗೊಳಿಸುವ ಸಂಬಂಧ ನಾವು ಒಂದು ತಂತ್ರಾಂಶ (ಆ್ಯಪ್) ಅಭಿವೃದ್ಧಿಪಡಿಸಿದ್ದೇವೆ. ಇನ್ಮುಂದೆ ದಾಖಲಾಗುವ ಕೇಸ್ಗಳಿಗೆ ಈ ಕಾನೂನುಗಳು ಅನ್ವಯ ಆಗಲಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ ಇವತ್ತಿನಿಂದ ದಾಖಲಾಗುವ ಎಲ್ಲ ಪ್ರಕರಣಗಳು ಹೊಸ ಕಾನೂನುಗಳಡಿ ಬರುತ್ತವೆ. ಹೊಸ ಕಾನೂನುಗಳ ಜಾರಿ ಬಗ್ಗೆ ನಾವು ಎಲ್ಲರಿಗೂ ತರಬೇತಿ ಕೊಟ್ಟಿದ್ದೇವೆ. ಕಾನ್ ಸ್ಟೆಬಲ್ನಿಂದ ಹಿಡಿದು ಅಧಿಕಾರಿಗಳವರೆಗೂ ತರಬೇತಿ ಕೊಟ್ಟಿದ್ದೇವೆ. ಇದಕ್ಕಾಗಿ ಪೊಲೀಸರಿಗೆ ಆ್ಯಪ್ ಸಿದ್ಧಪಡಿಸಲಾಗಿದೆ. ಪೊಲೀಸರಿಗೆ ಹೊಂದಾಣಿಕೆ ಆಗುವವರೆಗೂ ಈ ಆ್ಯಪ್ ನೋಡಿಕೊಂಡು ಕೆಲಸ ಮಾಡಬಹುದು’ ಈ ಕಾನೂನುಗಳು ಇಡೀ ದೇಶದಲ್ಲಿ ಜಾರಿಯಾಗಿದೆ, ಫೀಡ್ ಬ್ಯಾಕ್ ನೋಡಿಕೊಂಡು ಸರ್ಕಾರ ಮುಂದೆ ಕೆಲ ಪರಿಷ್ಕರಣೆ ಮಾಡಬಹುದು ಎಂದೂ ಹೇಳಿದರು.

ಸರ್ಕಾರದ ಭವಿಷ್ಯದ ಬಗ್ಗೆ ಸಿ .ಟಿ. ರವಿ ಮತ್ತು ಬಸವರಾಜ ಬೊಮ್ಮಾಯಿ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ಅದು ವ್ಯಾಖ್ಯಾನಗಳು. ಅವರವರಲ್ಲೇ ಹೇಳಿಕೆಗಳು ವಿಭಿನ್ನವಾಗಿವೆ. ಬೊಮ್ಮಾಯಿ ಒಂದು ಹೇಳಿಕೆ ಕೊಟ್ಟರೆ, ಸಿ ಟಿ. ರವಿ ಇನ್ನೊಂದು ಹೇಳಿಕೆ ಕೊಡುತ್ತಾರೆ. ಅವರಲ್ಲೇ ಹೊಂದಾಣಿಕೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದರು .

ಕಾನ್ಸ್ಟೆಬಲ್ಗಳು, ಅಂತರ್ ಜಿಲ್ಲಾ ವರ್ಗಾವಣೆಯಲ್ಲಿ ಗೊಂದಲ ಇರುವುದಾಗಿ ಹೇಳಿಕೊಂಡರು. ಇದಕ್ಕಾಗಿ ನಿಯಮಗಳನ್ನು ರಚಿಸಲಾಗುತ್ತದೆ. ಉತ್ತರ ಕರ್ನಾಟಕ ಕಡೆಯವರು ಇಲ್ಲಿಗೆ ಬಂದು ಕೆಲಸ ಮಾಡುವಲ್ಲಿ ಕೆಲವು ಸಮಸ್ಯೆಗಳಿವೆ. ಹೀಗಾಗಿ ಒಂದಷ್ಟು ನಿಯಮಗಳನ್ನು ಮಾಡಲಾಗುತ್ತಿದೆ’ ಪತಿ-ಪತ್ನಿ ವರ್ಗಾವಣೆ ವಿಚಾರಕ್ಕೂ ಹೊಸ ನಿಯಮಗಳನ್ನು ಮಾಡಲಾಗುವುದು. ಆದಷ್ಟು ಶೀಘ್ರವಾಗಿ ನಿಯಮಗಳನ್ನು ಮಾಡುತ್ತೇವೆ’ ಎಂದೂ ಹೇಳಿದರು.
ಡಿಕೆ ಶಿವಕುಮಾರ್ ಅವರಿಗೆ ಎರಡು ಪ್ರಮುಖ ಹುದ್ದೆ ಇದೆ. ಎರಡು ಜವಾಬ್ದಾರಿಯನ್ನು ನಿಭಾಯಿಸುವುದು ಬಹಳ ಕಷ್ಟ ಆಗುತ್ತದೆ. ಒಬ್ಬರಿಗೆ ಒಂದೇ ಹುದ್ದೆ ಇದ್ದರೆ ಒಳ್ಳೆಯದು ಎಂದು ಪರಮೇಶ್ವರ ಹೇಳಿದ್ದಾರೆ..

ಇನ್ನೂ ಕರವೇ ಪ್ರತಿಭಟನೆ ಮಾತನಾಡಿದ ಗೃಹ ಸಚಿವ ಪರಮೇಶ್ವರ ಕರವೇ ಪ್ರತಿಭಟನೆ ನ್ಯಾಯುತವಾಗಿ ಇದ್ದರೆ ಕರವೇ ಪ್ರತಿಭಟನೆ ಮಾಡಲಿ ಒಳ್ಳೆ ಉದ್ದೇಶ ಹೊಂದಿರ ಬೇಕೆಂದು ಎಂದರು .

Tags:

error: Content is protected !!