BELAGAVI

ಶಿಂದೊಳ್ಳಿಯಲ್ಲಿ ಕಿತ್ತೂರು ಚೆನ್ನಮ್ಮನವರ ಪುತ್ಥಳಿ ಪ್ರತಿಷ್ಠಾಪನೆಗೆ ಭೂಮಿ ಪೂಜೆ

Share

ಅಕ್ಷಯ ತೃತೀಯದ ಪವಿತ್ರ ದಿನದಂದು ಬೆಳಗಾವಿ ಜಿಲ್ಲೆಯ ಶಿಂದೊಳ್ಳಿ ಗ್ರಾಮದಲ್ಲಿ ಐತಿಹಾಸಿಕ ಕಾರ್ಯಕ್ರಮವೊಂದು ಜರುಗಿದೆ. ಸ್ವಾತಂತ್ರ್ಯ ಸಂಗ್ರಾಮದ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನವರ ಪುತ್ಥಳಿ ಪ್ರತಿಷ್ಠಾಪನೆಗೆ ಗ್ರಾಮಸ್ಥರು ಸಂಕಲ್ಪ ತೊಟ್ಟಿದ್ದು, ವಿಧ್ಯುಕ್ತವಾಗಿ ಭೂಮಿ ಪೂಜೆ ನೆರವೇರಿಸಿದ್ದಾರೆ.

ಅಕ್ಷಯ ತೃತೀಯದ ಶುಭ ಮುಹೂರ್ತದಲ್ಲಿ ಶಿಂದೊಳ್ಳಿ ಗ್ರಾಮದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನವರ ಪುತ್ಥಳಿ ಪ್ರತಿಷ್ಠಾಪಿಸುವ ಸದುದ್ದೇಶದಿಂದ ಭೂಮಿ ಪೂಜಾ ಕಾರ್ಯಕ್ರಮ ಅತ್ಯಂತ ಭಕ್ತಿಯಿಂದ ನೆರವೇರಿತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಮತ್ತು ಯುವಕರು ಒಗ್ಗೂಡಿ ಐತಿಹಾಸಿಕ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸುರೇಶ ಪಾಟೀಲ, ರಾಜು ಪಾಟೀಲ, ಬಾಬಾಗೌಡ ಪಾಟೀಲ, ಸುಮಿತಾ ಪಾಟೀಲ, ವೀರಭದ್ರಯ್ಯ ಪೂಜಾರ, ರಾಕೇಶ್ ಪಾಟೀಲ, ಯಲ್ಲಪ್ಪ ಶಾಹಾಪೂರಕರ, ಸುರೇಶ ಬಡಿಗೇರ, ರಮೇಶ ಅಂಗಡಿ, ಮಲ್ಲನಗೌಡ ಪಾಟೀಲ, ಮಲ್ಲಪ್ಪ ಅನಗೋಳಕರ, ಶಂಕರ ತಿಗಡಿ, ಬೀರಾ ಅನಗೋಳಕರ, ಅನಿಲ ಕೋಲಕಾರ, ನಿತಿನ ಚೌಗುಲೆ, ಶಿವಕುಮಾರ್ ಸೈಬನ್ನವರ, ಲಕ್ಷ್ಮಣ ಶಾಹಾಪೂರಕರ, ಸಂತೋಷ ನಿಲಜಿ, ವಿನಯ ಪಾಟೀಲ, ರಮೇಶ ಅನಗೋಳಕರ, ಮಾಹಾಂತೇಶ ಪಾಟೀಲ, ಬಸವರಾಜ ತಳವಾರ, ಪಿರಾಜಿ ಕಣಬರ್ಗಿ ಹಾಗೂ ನಿಂಗಣ್ಣ ಮೇಕಲಮರ್ಡಿ ಸೇರಿದಂತೆ ಗ್ರಾಮದ ಗಣ್ಯರು ಹಾಗೂ ಅಪಾರ ಸಂಖ್ಯೆಯ ಯುವಕರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Tags:

error: Content is protected !!