ಬೆಳಗಾವಿಯಿಂದ ಬೆಂಗಳೂರಿಗೆ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಬೊಲೆರೊ ವಾಹನವೊಂದನ್ನು ಬಜರಂಗದಳ ಕಾರ್ಯಕರ್ತರು ಧಾರವಾಡದ ಕೆಲಗೇರಿ ಬ್ರಿಜ್ ಬಳಿ ತಡೆದು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಕಾರ್ಯಕರ್ತರು, ಸುಮಾರು 60ಕ್ಕೂ ಹೆಚ್ಚು ಗೋವಿನ ಕರುಗಳನ್ನು ಕಡಿದು ಸಿದ್ಧಪಡಿಸಿದ ಗೋಮಾಂಸವನ್ನು ಸಾಗಿಸುತ್ತಿದ್ದ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಿದ್ದು ಹಿರೇಮಠ, ಅನುದೀಪ ಕುಲಕರ್ಣಿ, ಗುರುಶಾಂತ, ನಾಗರಾಜ, ಗಣೇಶ, ಧ್ರುವ, ದರ್ಶನ, ಉದಯ ಸೇರಿದಂತೆ ಕೆಲಗೇರಿ ಗ್ರಾಮಸ್ಥರು ಸಕ್ರಿಯವಾಗಿ ಭಾಗವಹಿಸಿದ್ದರು. ಈ ಕುರಿತು ಧಾರವಾಡ ಉಪ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
