BELAGAVI

ಬಡಾಲ ಅಂಕಲಗಿಯಲ್ಲಿ ಅಭಿವೃದ್ಧಿ ಪರ್ವ: ಸಂಸದ ಈರಣ್ಣ ಕಡಾಡಿ ಅನುದಾನದಡಿ ವಿವಿಧ ಕಾಮಗಾರಿಗಳಿಗೆ ಚಾಲನೆ!

Share

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಡಾಲ ಅಂಕಲಗಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳ ಅಬ್ಬರ ಶುರುವಾಗಿದೆ. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಸಂಸದರ ನಿಧಿಯಡಿ ಮಂಜೂರಾದ ನೂತನ ಬಸ್ ನಿಲ್ದಾಣದ ಕಾಮಗಾರಿಗೆ ಬಿಜೆಪಿ ಮುಖಂಡ ಧನಂಜಯ ಜಾಧವ ಅವರು ಭೂಮಿ ಪೂಜೆ ನೆರವೇರಿಸುವ ಮೂಲಕ ಅಧಿಕೃತ ಚಾಲನೆ ನೀಡಿದ್ದಾರೆ.

ಬಡಾಲ ಅಂಕಲಗಿ ಗ್ರಾಮದಲ್ಲಿ ನಡೆದ ಭೂಮಿ ಪೂಜೆ ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ಗ್ರಾಮೀಣ ಮಂಡಲದ ಮಾಜಿ ಅಧ್ಯಕ್ಷ ಧನಂಜಯ ಜಾಧವ ಅವರು, ಸಂಸದ ಈರಣ್ಣ ಕಡಾಡಿ ಅವರು ಗ್ರಾಮೀಣ ಭಾಗದ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು. ಕೇವಲ ಬಸ್ ನಿಲ್ದಾಣ ಮಾತ್ರವಲ್ಲದೆ, ಗ್ರಾಮದ ಯುವಕರಿಗಾಗಿ ಸುಸಜ್ಜಿತ ವ್ಯಾಯಾಮಶಾಲೆ, ಓದುಗರಿಗಾಗಿ ಗ್ರಂಥಾಲಯ ಹಾಗೂ ರಸ್ತೆಗಳಿಗೆ ಪೇವರ್ಸ್ ಅಳವಡಿಸುವಂತಹ ಹತ್ತಾರು ಜನಪರ ಕೆಲಸಗಳಿಗೆ ಸಂಸದರು ದೊಡ್ಡ ಮಟ್ಟದ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಅಭಿವೃದ್ಧಿ ಕಾಮಗಾರಿಗಳಿಂದಾಗಿ ಬಡಾಲ ಅಂಕಲಗಿ ಗ್ರಾಮದ ಮುಖಪುಟವೇ ಬದಲಾಗಲಿದ್ದು, ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮೋಹನ ಅಂಗಡಿ, ಅಶೋಕ ಚಾಪಗಾವಿ, ಶಿವಣ್ಣ ಬೆಳಗಾವಿ ಸೇರಿದಂತೆ ಗ್ರಾಮದ ಪ್ರಮುಖ ಗಣ್ಯರು ಹಾಗೂ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದು, ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಿದ ಸಂಸದರಿಗೆ ಧನ್ಯವಾದ ಅರ್ಪಿಸಿದರು. ಈ ನೂತನ ಬಸ್ ನಿಲ್ದಾಣದಿಂದಾಗಿ ಪ್ರಯಾಣಿಕರ ದಶಕಗಳ ಬೇಡಿಕೆ ಈಡೇರಿದಂತಾಗಿದೆ.

Tags:

error: Content is protected !!