ಬೆಳಗಾವಿ-ಹೈದರಾಬಾದ್ ನಡುವೆ ‘ರಾಜರಥ’ ಬಸ್ ಸಂಚಾರ
ಅತ್ಯಾಧುನಿಕ ಎಸಿ ಸ್ಲೀಪರ್ ಸೇವೆಯ ಶುಭಾರಂಭ
ಪ್ರಯಾಣಿಕರಿಗೆ ಗುಲಾಬಿ ನೀಡಿ ಬರಮಾಡಿಕೊಂಡ ಉಪಾಧ್ಯಕ್ಷರು
ಸಂತಸ ವ್ಯಕ್ತಪಡಿಸಿದ ಪ್ರಯಾಣಿಕರು

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಬೆಳಗಾವಿಯಿಂದ ಹೈದ್ರಾಬಾದ್’ ವರೆಗೆ ಸೇವೆ ನೀಡಲು ರಾಜರಥ ಎಂಬ ಹೊಸ ಎಸಿ ಸ್ಲೀಪರ್ ಕೋಚ್ ಬಸ್ ಸೇವೆಯನ್ನು ಆರಂಭಿಸಲಾಗಿದೆ.
ಗುರುವಾರ ಸಂಜೆ ಬೆಳಗಾವಿಯಲ್ಲಿ ನೂತನ ರಾಜರಥ ಎಸಿ ಸ್ಲೀಪರ್ ಕೋಚ್ ಬಸ್’ಗೆ ಪೂಜೆ ಸಲ್ಲಿಸಿ, ಬೆಳಗಾವಿ ಟು ಹೈದ್ರಾಬಾದ್ ಬಸ್ ಸೇವೆಗೆ ಶುಭಾರಂಭ ಮಾಡಲಾಯಿತು. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷರಾದ ಸುನೀಲ್ ಹನುಮಣ್ಣವರ ಮೊದಲ ಪ್ರವಾಸ ಕೈಗೊಂಡ ಪ್ರಯಾಣಿಕರಿಗೆ ಗುಲಾಬಿ ಹೂವನ್ನು ನೀಡಿ ಬರಮಾಡಿಕೊಂಡರು.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಬೆಳಗಾವಿಯಿಂದ ಹೈದ್ರಾಬಾದ್’ ವರೆಗೆ ಸೇವೆ ನೀಡಲು ರಾಜರಥ ಎಂಬ ಹೊಸ ಎಸಿ ಸ್ಲೀಪರ್ ಕೋಚ್ ಬಸ್ ಸೇವೆಯನ್ನು ಆರಂಭಿಸಲಾಗಿದೆ. ಬೆಳಗಾವಿಯಿಂದ ಸಂಜೆ 7.30ಕ್ಕೆ ಹೊರಡುವ ರಾಜರಥ ಬೆಳಿಗ್ಗೆ 6 ಗಂಟೆಗೆ ಹೈದ್ರಾಬಾದ್ ತಲುಪಲಿದೆ. ಬೆಳಗಾವಿಗರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷರಾದ ಸುನೀಲ್ ಹನುಮಣ್ಣವರ ಹೇಳಿದರು.
