• ಪ್ರಿಯಕರನೊಂದಿಗೆ ಓಡಿಹೋಗಿದ್ದ ಯುವತಿಯ ಭೀಕರ ಹತ್ಯೆ
• ಕುಟುಂಬದ ಮರ್ಯಾದೆಗಾಗಿ ಕೊಲೆ
• ವಿಷವಿಕ್ಕಿ ಕೊಂದ ಬಳಿಕ ಬೇರೆ ರಾಜ್ಯದಲ್ಲಿ ಶವ ದಹನ
• ಯಮಕನಮರಡಿ ಪೊಲೀಸರಿಂದ ಮೂವರು ಆರೋಪಿಗಳ ದಸ್ತಗಿರಿ

ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಚ್ಚಿಬೀಳಿಸುವ ಮರ್ಯಾದಾ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಪತಿಯನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿಹೋಗಿದ್ದಾಳೆಂಬ ಕಾರಣಕ್ಕೆ ಸ್ವಂತ ಕುಟುಂಬದವರೇ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ ಶವ ಸುಟ್ಟು ಹಾಕಿರುವ ಪ್ರಕರಣವನ್ನು ಯಮಕನಮರ್ಡಿ ಸಿಪಿಐ ಜಾವೀದ್ ಮುಶಾಪುರೆ ಅವರು ಬೇಧಿಸಿದ್ದಾರೆ.
ಪ್ರೀತಿ ಹಾಗೂ ಕುಟುಂಬದ ಮರ್ಯಾದೆಯ ಹೆಸರಿನಲ್ಲಿ ನಡೆಯುತ್ತಿರುವ ಕ್ರೌರ್ಯಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಬಲಿ ಪಡೆದಂತಾಗಿದೆ. ರಾಯಬಾಗ ತಾಲೂಕಿನ ಹಣಬರಟ್ಟಿ ಗ್ರಾಮದ ಸತ್ಯವ್ವ ಸಂತೋಷ ಹಳವಿ (24) ಎಂಬಾಕೆಯನ್ನು ಆಕೆಯ ಕುಟುಂಬದವರೇ ವಿಷವಿಕ್ಕಿ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಶವವನ್ನು ಸುಟ್ಟು ಹಾಕಿದ್ದಾರೆ. ಕೃಷ್ಣಾ ಸಹದೇವ ಪಾಟೀಲ ಕ್ಷತ್ರಿಯ ಜಾತಿಗೆ ಸೇರಿದವನು, ಮತ್ತು ಮೃತ ಮೃತ ಸತ್ಯವ್ವಾ ಸಂತೋಷ ಹಳವರ ಇಬ್ಬರು ಹುಕ್ಕೇರಿ ತಾಲೂಕಿನ ನದಿಗುಡಿಕೇತ್ರದವರು, ಇಬ್ಬರು ಪ್ರೀತಿ ಮಾಡುತ್ತಿರುತ್ತಾರೆ, ನಾಲ್ಕು ವರ್ಷದ ಹಿಂದೆ ಸತ್ಯವಾ ಇವಳಿಗೆ ರಾಯಬಾಗ ತಾಲೂಕಿನ ಹನಬರಟ್ಟಿಯ, ಸಂತೋಷ್ ಹೇಳವಿ ಇವನೊಂದಿಗೆ ಮದುವೆ ಮಾಡಿ ಕೊಟ್ಟಿದ್ದು, ಮದುವೆಯ ನಂತರವೂ ಸಹ ಇವರ ಪ್ರೀತಿ ಮುಂದುವರೆದಿತ್ತು. ಈ ಹಿನ್ನೆಲೆ ಸತ್ಯವ್ವ, ಕಳೆದ ಫೆಬ್ರವರಿ 17 ರಂದು ಆತನೊಂದಿಗೆ ಬೇರೆ ಮನೆ ಮಾಡಿ ಬೆಳವಡಿಯಲ್ಲಿ ವಾಸವಿದ್ದಳು. ಆದರೇ ತವರೂ ಮನೆಯವರು ಈ ಬಗ್ಗೆ ಯಮಕನಮರಡಿ ಮತ್ತು ರಾಯಬಾಗ ಠಾಣೆಗಳಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ವಿಷಯ ತಿಳಿದು ಆಕೆಯನ್ನು ಪತ್ತೆ ಹಚ್ಚಿ ಕರೆತಂದಿದ್ದ ಕುಟುಂಬಸ್ಥರು, ಜಾತಿ ಬೇರೆ ಎಂಬ ಕಾರಣಕ್ಕೆ ಬುದ್ಧಿವಾದ ಹೇಳಿದ್ದರೂ ಆದರೂ ಆಕೆ ಅವರ ಮಾತನ್ನು ಕೇಳಲಿಲ್ಲ. ಮಾರ್ಚ್ 21 ರಂದು ಸಾಂಗ್ಲಿ ಜಿಲ್ಲೆಯ ಅರಗ ಗ್ರಾಮದಲ್ಲಿದ್ದಾಗ ಸತ್ಯವ್ವ ಮತ್ತೆ ಪ್ರಿಯಕರನ ಬಳಿಯೇ ಹೋಗುವುದಾಗಿ ಪಟ್ಟು ಹಿಡಿದಿದ್ದಾಳೆ. ಇದರಿಂದ ಆಕ್ರೋಶಗೊಂಡ ಆರೋಪಿಗಳು ಬಲವಂತವಾಗಿ ವಿಷ ಕುಡಿಸಿ ಆಕೆಯನ್ನು ಹತ್ಯೆ ಮಾಡಿದ್ದಾರೆ. ಅಂದೇ ರಾತ್ರಿ ಅರಗ ಗ್ರಾಮದ ಸ್ಮಶಾನದಲ್ಲಿ ಶವವನ್ನು ಸುಟ್ಟು ಹಾಕುವ ಮೂಲಕ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾರೆ. ಈ ಬಗ್ಗೆ ಕೃಷ್ಣಾ ಪಾಟೀಲ ನೀಡಿದ ದೂರಿನನ್ವಯ ತನಿಖೆ ಕೈಗೊಂಡ ಯಮಕನಮರಡಿ ಪಿಐ ಜಾವೀದ ಎಫ್. ಮುಷಾಪುರಿ ಅವರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೃತಳ ಚಿಕ್ಕಪ್ಪ ಪ್ರಕಾಶ ಭೀಮಪ್ಪ ಹಳವರ (46), ಸಹೋದರ ಶಾನೂರ ಸದಾಶಿವ ಹಳವರ (35) ಮತ್ತು ಭಾವ ಕಲ್ಲಪ್ಪ ಮಾಯಪ್ಪ ಹಳವಿ (40) ಎಂಬುವವರನ್ನು ಬಂಧಿಸಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
