1. ಬೆಳಗಾವಿ ಮಾಜಿ ಸೈನಿಕರಿಂದ ಸಂವಿಧಾನ ಹಬ್ಬ
2. ಸಾರ್ವಜನಿಕರಿಗೆ 200 ಸಂವಿಧಾನ ಪೀಠಿಕೆಗಳ ವಿತರಣೆ
3. ಬಾಬಾಸಾಹೇಬರು ದೇಶದ ಪ್ರತಿಯೊಬ್ಬ ಪ್ರಜೆಗೂ ಪ್ರೇರಣೆ
4. ಸಮಬಾಳು-ಸಮಾನತೆಯ ಸಂದೇಶ ಸಾರಿದ ಸೈನಿಕರು


ಗಡಿಯಲ್ಲಿ ದೇಶ ಕಾಯುವ ಸೈನಿಕರು ಇದೀಗ ದೇಶದ ಸಂವಿಧಾನದ ಮೌಲ್ಯಗಳನ್ನು ಮನೆಮನೆಗೆ ಮುಟ್ಟಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಬೆಳಗಾವಿಯಲ್ಲಿ ಮಾಜಿ ಸೈನಿಕರ ಮಹಾಒಕ್ಕೂಟದ ವತಿಯಿಂದ ಸಂವಿಧಾನದ ಪೀಠಿಕೆಯ ಪ್ರತಿಗಳನ್ನು ಹಂಚುವ ಮೂಲಕ ಅತ್ಯಂತ ವಿಭಿನ್ನವಾಗಿ ಬಾಬಾಸಾಹೇಬರ ಜನ್ಮದಿನವನ್ನು ಆಚರಿಸಲಾಯಿತು.
ಬೆಳಗಾವಿ ಜಿಲ್ಲೆ ಮಾಜಿ ಸೈನಿಕರ ಸಂಘಟನೆಗಳ ಮಹಾಒಕ್ಕೂಟದ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ: ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರ ಪೂಜೆ ಸಲ್ಲಿಸುವುದರ ಮೂಲಕ ಹಾಗೂ ಸಾರ್ವಜನಿಕರಿಗೆ ಸಂವಿಧಾನ ಪೀಠಿಕೆಯ ಪ್ರತಿಗಳನ್ನು ಹಂಚುವುದರ ಮೂಲಕ ವಿಭಿನ್ನವಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.
ಭಾರತದ ಪ್ರತಿಯೊಬ್ಬ ಪ್ರಜೆಯು ತನ್ನ ಜೀವನದ ಪ್ರತಿಯೊಂದು ಹೆಜ್ಜೆ ಹೆಜ್ಜೆಗೂ ಪಾಲನೆ ಮಾಡಬೇಕಾದ ನಿಯಮಾವಳಿಗಳ ಹಾಗೂ ಪ್ರತಿಯೊಬ್ಬರಿಗೂ ಅವಶ್ಯಕವಾಗಿರುವ ಅತ್ಯದ್ಭುತ ಗ್ರಂಥವಾದ ಸಂವಿಧಾನವನ್ನು ರಚಿಸಿ ಸಮಾಜದಲ್ಲಿ ಸಮಾನತೆಯ ಬೆಳಕನ್ನು ಚೆಲ್ಲುವ ಕೆಲಸ ಮಾಡಿರುವಂತಹ ಧೀಮಂತ ನಾಯಕ ಅದು ಡಾ. ಬಿಆರ್ ಅಂಬೇಡ್ಕರ್ ಅವರು ಇವರು ಯಾವುದೇ ಒಂದು ಸಮಾಜದ ಯಾವುದೇ ಒಂದು ಜಾತಿಗೆ ಸೀಮಿತವಾಗಿರುವ ನಾಯಕರಲ್ಲ ದೇಶದ ಪ್ರತಿಯೊಬ್ಬ ಪ್ರಜೆಗೂ ಮಾದರಿ ಮತ್ತು ಪ್ರೇರಣೆಯಾಗಿರುವಂತಹ ಒಬ್ಬ ಸಂವಿಧಾನ ಶಿಲ್ಪಿ ಬಡವ -ಶ್ರೀಮಂತ ಮೇಲ್ವರ್ಗ-ಕೆಳ ವರ್ಗದ ಎಲ್ಲರನ್ನು ಒಂದೇ ತಕ್ಕಡಿಯಲ್ಲಿಟ್ಟು ಸಮಾನತೆಯನ್ನು ನೀಡಿದವರು ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಹಾಒಕ್ಕೂಟದ ಜಿಲ್ಲಾಧ್ಯಕ್ಷ ಜಗದೀಶ ಪೂಜೇರಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಂವಿಧಾನ ಪೀಠಿಕೆಯ 200 ಪ್ರತಿಗಳನ್ನು ಸಾರ್ವಜನಿಕರಿಗೆ ಹಂಚಿ ಅಂಬೇಡ್ಕರ್ ಅವರ ಜನ್ಮ ಜಯಂತಿಯ ಶುಭಾಶಯ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಜಗದೀಶ ಪೂಜೇರಿ ಉಪಾಧ್ಯಕ್ಷ ಸಂಗಪ್ಪ ಮೇಟಿ, ಸಹ ಕಾರ್ಯದರ್ಶಿಗಳಾದ ಸಂತೋಷ ಮಠಪತಿ, ಹಿರಿಯರಾದ ಅಶೋಕ ಮಜಗಿ, ಬಸವರಾಜ ವನ್ನೂರ, ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಪಟ್ಟಣಶೆಟ್ಟಿ ಸದಸ್ಯರಾದ ಗೀತಾ ಗನಬಸಪ್ಪನವರ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
