BELAGAVI

ಬೆಳಗಾವಿ: ವಂಟಮುರಿ ಕಾಲನಿಯಲ್ಲಿ ತಪ್ಪಿದ ಬಾಲ್ಯ ವಿವಾಹ

Share

ಬೆಳಗಾವಿ ನಗರದ ವಂಟಮುರಿ ಕಾಲನಿಯಲ್ಲಿ ನಡೆಯಲಿದ್ದ ಬಾಲ್ಯ ವಿವಾಹವನ್ನು ಅಕ್ಕಪಡೆ ಹಾಗೂ ಪೊಲೀಸ್ ಇಲಾಖೆ ತಡೆದು 17 ವರ್ಷದ ಬಾಲಕಿಯನ್ನು ರಕ್ಷಣೆ ಮಾಡಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಹೇಳಿದರು.

ಗುರುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಏ.20 ರಂದು ಪೆಟ್ರೋಲಿಂಗ್ ವೇಳೆ ಅಕ್ಕಪಡೆ ಸಿಬ್ಬಂದಿಗೆ ಒಂದು ಮನೆಯ ಮುಂದೆ ಮಂಟಪ ಹಾಕಿರುವುದು ಅನುಮಾನಾಸ್ಪದವಾಗಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದರು. ಈ ವೇಳೆ ಏ.21ರಂದು ಬಾಲಕಿಯ ಮದುವೆಯನ್ನು ಮಹಾರಾಷ್ಟ್ರದ ಪುಣಾ ನಿವಾಸಿಯೊಂದಿಗೆ ನೆರವೇರಿಸಲು ಸಿದ್ಧತೆ ಮಾಡಿರುವುದು ತಿಳಿದುಬಂದಿತು ಎಂದರು.
ಬಾಲಕಿಯ ಆಧಾರ್ ಕಾರ್ಡ್ ಹಾಗೂ ಜನನ ಪ್ರಮಾಣ ಪತ್ರ ಪರಿಶೀಲಿಸಿದಾಗ, ಆಕೆಗೆ ಕೇವಲ 17 ವರ್ಷ 4 ತಿಂಗಳು ವಯಸ್ಸು ಇರುವುದಾಗಿ ದೃಢಪಟ್ಟಿತು. ತಕ್ಷಣ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಅವರ ಮಾರ್ಗದರ್ಶನದಲ್ಲಿ ಮಕ್ಕಳ ಸಹಾಯವಾಣಿ ತಂಡ ಹಾಗೂ ಮಾಳಮಾರುತಿ ಪೊಲೀಸ್ ಠಾಣೆಯ 112 ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಕಾರ್ಯಾಚರಣೆ ನಡೆಸಲಾಯಿತು.ಸಮಯಕ್ಕೆ ತಕ್ಕಂತೆ ಬಾಲ್ಯ ವಿವಾಹವನ್ನು ತಡೆದು ಬಾಲಕಿಯನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ. ಈ ಸಂಬಂಧ ಬಾಲಕಿಯ ತಂದೆಯ ವಿರುದ್ಧ ಬೆಳಗಾವಿ ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.

Tags:

error: Content is protected !!