Udupi

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಕಲಾವಿದ ಪಿ.ಎನ್. ಆಚಾರ್ಯರಿಂದ ‘ಸರಸ್ವತಿ’ ಚಿತ್ರ ಉಡುಗೊರೆ

Share

ಉಡುಪಿಯ ಖ್ಯಾತ ಕಲಾವಿದ ಮತ್ತು ಈ ಬಾರಿಯ ಹಿರಿಯ ನಾಗರಿಕರ ದಿನಾಚರಣೆಯ ಪ್ರಶಸ್ತಿ ಪುರಸ್ಕೃತರಾದ ಪಿ.ಎನ್. ಆಚಾರ್ಯ ಅವರು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿ ಮಾಡಿ ಗೌರವಿಸಿದರು. ಈ ಸಂದರ್ಭದಲ್ಲಿ ಅವರು ತಾವು ರಚಿಸಿದ ಅದ್ಭುತ ಕಲಾಕೃತಿಯನ್ನು ಸಚಿವರಿಗೆ ಹಸ್ತಾಂತರಿಸಿದರು.

ಕಲಾ ವಿಭಾಗದಲ್ಲಿನ ಸುದೀರ್ಘ ಮತ್ತು ಗಣನೀಯ ಸಾಧನೆಗಾಗಿ ಈ ವರ್ಷದ ಹಿರಿಯ ನಾಗರಿಕರ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಉಡುಪಿಯ ಹಿರಿಯ ಕಲಾವಿದ ಪಿ.ಎನ್. ಆಚಾರ್ಯ ಅವರು ಭಾನುವಾರ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿ ಮಾಡಿದರು. ಉಡುಪಿಯಲ್ಲಿ ನಡೆದ ಈ ಸೌಜನ್ಯಯುತ ಭೇಟಿಯ ಸಂದರ್ಭದಲ್ಲಿ, ಸಚಿವರು ಕಲಾವಿದರ ಸಾಧನೆಯನ್ನು ಶ್ಲಾಘಿಸಿ ಅಭಿನಂದನೆಗಳನ್ನು ಸಲ್ಲಿಸಿದರು.. ಕಲಾಕೃತಿಯ ಸೊಬಗನ್ನು ಕಂಡು ಸಚಿವರು ಸಂತಸ ವ್ಯಕ್ತಪಡಿಸಿದ್ದಲ್ಲದೆ, ಹಿರಿಯ ಕಲಾವಿದರ ಈ ಪ್ರೀತಿಯ ಉಡುಗೊರೆಯನ್ನು ತುಂಬು ಹೃದಯದಿಂದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಗೂ ಕಲಾಭಿಮಾನಿಗಳು ಉಪಸ್ಥಿತರಿದ್ದರು.

Tags:

error: Content is protected !!