
ಚಿಕ್ಕೋಡಿ:ಕಬ್ಬುದರ ಘೋಷಣೆಗೆ ಆಗ್ರಹಿಸಿ ನಿಪ್ಪಾಣಿ ತಾಲೂಕಿನ
ಬೇಡಕಿಹಾಳ ಸರ್ಕಲ್‌ನಲ್ಲಿ ರೈತ ಸಂಘಟನೆಗಳು ನಡೆಸುತ್ತಿರುವ ಧರಣಿ ಐದನೇ ದಿನದಲ್ಲಿ ಮುಂದುವರಿದಿದೆ.
ನಾನಾ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತಿದ್ದ 60ಕ್ಕೂ ಅಧಿಕ ಟ್ರ್ಯಾಕ್ಟರ್‌ಗಳನ್ನು ರೈತರು ಮಾರ್ಗ ಮಧ್ಯದಲ್ಲೇ ತಡೆದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಜವಾಹರ ಸಕ್ಕರೆ ಕಾರ್ಖಾನೆ ಸಂಚಾಲಕರು, ಕಬ್ಬು ಸಾಗಿಸುತ್ತಿರುವ ವಾಹನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಆದರೆ, ದರ ನಿಗದಿಯಾಗುವವರೆಗೂ ಕಬ್ಬು ಕಟಾವಿಗೆ ಅನುಮತಿ ನೀಡುವುದಿಲ್ಲ ಎಂದು ಪ್ರತಿಭಟನೆ ನಿರತ ರೈತರು ಎಚ್ಚರಿಸಿದರು.

