savdatti

ಪಾಸ್ ಇಲ್ಲ ಎಂದು ಗುಡ್ಡಗಾಡಿನಲ್ಲಿ ವಿದ್ಯಾರ್ಥಿಗಳನ್ನು ಬಸ್ಸನಿಂದ ಇಳಿಸಿದ ಕಂಡಕ್ಟರ್!! ಬಸ್ ತಡೆದು ಪ್ರತಿಭಟಿಸಿದ ಪೋಷಕರು

Share

ಮಾರ್ಗ ಮಧ್ಯದಲ್ಲಿಯೇ ಶಾಲಾ ವಿದ್ಯಾರ್ಥಿಗಳನ್ನ ಕೆಳಗಿಸಿ ಹೋಗಿದ್ದ ಬಸ್ ಕಂಡಕ್ಟರ್ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಹೊರವಲಯದಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಹೊರವಲಯದ ಗುಡ್ಡಗಾಡು ಪ್ರದೇಶದಲ್ಲಿ ಮಾರ್ಗಮಧ್ಯದಲ್ಲಿಯೇ ಶಾಲಾ ವಿದ್ಯಾರ್ಥಿಗಳನ್ನ ಕೆಳಗಿಸಿ ಹೋಗಿದ್ದ ಬಸ್ ಕಂಡಕ್ಟರ್ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವಿಲುತೀರ್ಥದಿಂದ ಮುನವಳ್ಳಿ ಕಡೆಗೆ ಹೋಗುತ್ತಿದ್ದ ಬಸ್ ಕಂಡಕ್ಟರ್ ಬಸ್ ಪಾಸ್ ಇಲ್ಲದಕ್ಕೆ ಡ್ಯಾಮ್ ಮಧ್ಯದ ಗುಡ್ಡದ ಪ್ರದೇಶ ರಸ್ತೆಯಲ್ಲಿ ವಿದ್ಯಾರ್ಥಿಗಳನ್ನು ಬಿಟ್ಟು ಹೋಗಿರುವುದಾಗಿ ಪಾಲಕರು ಆರೋಪಿಸಿದ್ದಾರೆ.

ವಾಪಸ್ ಬರುವಾಗ ಬಸ್ ತಡೆದು ವಿದ್ಯಾರ್ಥಿಗಳ ಪೋಷಕರ ಆಕ್ರೋಶ ವ್ಯಕ್ತಪಡಿಸಿ ಬಸ್ ನಿರ್ವಾಹಕನ ವಿರುದ್ಧ ಡಿಪೋ ಮ್ಯಾನೇಜರ್ ಗೆ ಕ್ರಮಕೈಗೊಳ್ಳಬೇಕೆಂದು ಪೋನ್ ಕರೆ ಮಾಡಿ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫ್ಲೋ

ಸವದತ್ತಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Tags:

error: Content is protected !!