ನಿಪ್ಪಾಣಿ- ಮುಧೋಳ ರಾಜ್ಯ ಹೆದ್ದಾರಿ ಕಪ್ಪಲಗುದ್ದಿ ಗ್ರಾಮದ ಮುನ್ಯಾಳ ಕಿಲಾನ್ ಹತ್ತಿರ ಎರಡು ಟ್ಯಾಕ್ಟರ್ ಗಳ ನಡುವೆ ಸಂಭವಿಸಿದ ಅಪಘಾತ ಸ್ಥಳದಲ್ಲೇ 2 ಸಾವು 20 ಜನರಕ್ಕಿಂತ ಹೆಚ್ಚಿಗೆ ಗಂಭೀರ ಗಾಯವಾಗಿರುವ ಘಟನೆ ಶನಿವಾರದಂದು ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ರಾಯಬಾಗ ತಾಲೂಕಿನ ಮಂಟೂರ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಬಬಲಾದಿ ಜಾತ್ರೆಯಿಂದ ಮರಳಿ ಸ್ವ-ಗ್ರಾಮಕ್ಕೆ ತೆರಳುವ ವೇಳೆ ಈ ಅಪಘಾತ ಸಂಭವಿಸಿದ್ದು, ಅಪಘಾತ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಮೂಡಲಗಿ ಪಟ್ಟಣದ ವೆಂಕಟೇಶ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.