ಅಥಣಿ:ಕಾರ್ ಹಾಗೂ ಟ್ರೈಕ್ಟರ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ಗಂಭೀರ ಗಾಯಗೊಂಡ ಘಟನೆ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದಿದೆ.

ತಾಂವಶಿ-ಅನಂತಪುರ ರಸ್ತೆ ಮದ್ಯ ಮಾರ್ಗದಲ್ಲಿ ಎರಡು ವಾಹನಗಳ ಮದ್ಯ ಮುಖಾ-ಮುಖಿ ಡಿಕ್ಕಿಯಾಗಿದೆ ನಿನ್ನೆ ಸಾಯಂಕಾಲ 6:00 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಅಪಘಾತದ ತಿವ್ರತೆಗೆ ಕಾರ್ ನುಜ್ಜುಗುಜ್ಜಾಗಿದ್ದು ಟ್ರ್ಯಾಕ್ಟರ್ ಎರಡು ತುಂಡಾಗಿದೆ.
ಅಪಘಾತದಲ್ಲಿ ಕಾರ್ ಚಾಲಕ ಇಲಾಯಿ ತಾಂಬೋಳಿ (29) ಹಾಗೂ ಸ್ನೇಹಿತ ಜ್ಞಾನೇಶ್ವರ ನಾಯ್ಕ ಇಬ್ಬರಿಗೂ ಗಂಭೀರ ಗಾಯಗಳಾಗಿವೆ ಸ್ಥಳೀಯರ ಸಹಾಯದಿಂದ ಇಬ್ಬರನ್ನ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ರವಾಣಿಸಿಲಾಗಿದೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.