Bagalkot

ಲೋಕಾಪೂರ : ಹದಗೆಟ್ಟ ರಸ್ತೆಗಳು, ಗುಂಡಿಗೆ ಸಿಲುಕುವ ವಾಹನಗಳು

Share

ಬಾಗಲಕೋಟೆ ಜಿಲ್ಲೆ ಲೋಕಾಪುರ ಪಟ್ಟಣದಲ್ಲಿ ಮಣ್ಣು ತುಂಬಿಕೊಂಡಿರುವ ಲಾರಿಗಳ ಓಡಾಟದಿಂದಾಗಿ ರಸ್ತೆಗಳು ತೀವ್ರ ಹದಗೆಟ್ಟಿದ್ದು ವಾಹನ ಸಂಚಾರರು ಶಪಿಸುವಂತಾಗಿದೆ

ಲೋಕಾಪುರ್ ಕಾಡರಕೊಪ್ಪ ರಸ್ತೆ ಸೇರಿದಂತೆ ಪಟ್ಟಣದ ಬಹುತೇಕ ರಸ್ತೆಗಳು ಹದಗೆಟ್ಟು ಗುಂಡಿಗಳು ಬಿದ್ದಿವೆ. ಮಣ್ಣು ಮಾಫಿಯಾದವರಿಂದ ಅಕ್ರಮ ಮೊಹರಂ ಓವರ್ಲೋಡ್ ಮಾಡಿಕೊಂಡು ಟಿಪ್ಪರಗಳು ಸಂಚರಿಸುತ್ತಿರುವುದರಿಂದ ರಸ್ತೆಗಳು ಹದಗಟ್ಟಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಗುಂಡಿಗಳಲ್ಲಿ ಕಲ್ಲುಗಳನ್ನು ಇಟ್ಟು ಗುರುತಿಸುವಂತಾಗಿದೆ

ಗುಂಡಿಗಳಲ್ಲಿ ವಾಹನಗಳು ಸಿಲುಕಿ ಕೊಳ್ಳುತ್ತಿವೆ ವಾಹನ ಸವಾರರು ಕೈಯಲ್ಲಿ ಪ್ರಾಣವನ್ನು ಹಿಡಿದುಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಸ್ವಲ್ಪ ಯಾಮಾರಿದರೂ ಪರಲೋಕ ಗ್ಯಾರಂಟಿ. ಮಣ್ಣು ಮಾಫಿಯಾದವರ ಮೇಲೆ ಕ್ರಮ ಕೈಗೊಳ್ಳಬೇಕಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತುಕೊಂಡಿದ್ದಾರೆ ಪಟ್ಟಣ ಪಂಚಾಯಿತಿಯವರು ಕಂಡು ಕಾಣದಂತೆ ಇದ್ದಾರೆ ಇದರಿಂದ ರೋಸಿಹೋಗಿರುವ ಸಾರ್ವಜನಿಕರು ಗಣಿ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಪ್ರಾಣ ಹಾನಿಗಳು ಸಂಭವಿಸುವ ಮೊದಲೇ ರಸ್ತೆಗಳನ್ನು ದುರಸ್ತಿ ಮಾಡಬೇಕೆಂದು ಆಗ್ರಹಿಸಿದ್ದಾರೆ

Tags:

error: Content is protected !!