ಬೆಳಗಾವಿ ನಗರದ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಹಿನ್ನೆಲೆ ಇಂದು ಬೆಳಗಾವಿಯಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ರೌಡಿ ಪರೇಡ್ ನಡೆಸಿ, ಕಮ್ಯುನಲ್ ರೌಡಿಗಳು, ನಾರ್ಕೋಟಿಕ್ಸ್ ರೌಡಿಗಳು, ಸೋಷಿಯಲ್ ಮಿಡಿಯಾದಲ್ಲಿ ಕಮ್ಯುನಲ್ ಪೋಸ್ಟ್ ಹಾಕಿದವರಿಗೆ ಕಮಿಷನರ್ ವಾರ್ನಿಂಗ್ ನೀಡಲಾಯಿತು.

ಬೆಳಗಾವಿಯಲ್ಲಿ ಅಶ್ವತ್ಥಾಮ ಮಂದಿರಕ್ಕೆ ಕಲ್ಲೇಸೆತ, ಬುರ್ಖಾ ಧರಿಸಿ ಡ್ಯಾನ್ಸ್ ಪ್ರಕರಣ ಹಿನ್ನೆಲೆ ಇಂದು ಬೆಳಗಾವಿಯ ಬೆಳಗಾವಿ ಜಿಲ್ಲಾ ಪೊಲೀಸ ಕವಾಯತು ಮೈದಾನದಲ್ಲಿ ಬೆಳಗಾವಿ ನಗರದ 13 ಪೊಲೀಸ್ ಠಾಣೆ ವ್ಯಾಪ್ತಿಯ 220ಕ್ಕೂ ಅಧಿಕ ಕ್ರಿಮಿನಲ್ ರೌಡಿಗಳ ಪರೇಡ್ ನಡೆಸಲಾಯಿತು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಮಿಷ್ನರ್ ಯಡಾ ಮಾರ್ಟಿನ್ ಅವರ ನೇತೃತ್ವದಲ್ಲಿ ಈ ಪರೇಡ್ ನಡೆಯಿತು. ಕಮ್ಯುನಲ್ ರೌಡಿಗಳು, ನಾರ್ಕೋಟಿಕ್ಸ್ ರೌಡಿಗಳು, ಸೋಷಿಯಲ್ ಮಿಡಿಯಾದಲ್ಲಿ ಕಮ್ಯುನಲ್ ಪೋಸ್ಟ್ ಹಾಕಿದವರಿಗೆ ಕಮಿಷನರ್ ಸಾಹೇಬ್ರು ಖಡಕ್ಕಾಗಿಯೇ ವಾರ್ನಿಂಗ್ ನೀಡಿದರು.
ರಮಜಾನ್ ಹಬ್ಬದ ವೇಳೆ ಶಾಂತಿ ಭಂಗ ಮಾಡದಂತೆ ಮತ್ತು ಕ್ರೈಮ್ ಹಿಸ್ಟರಿ ಹೊಂದಿದವರು ಬಾಲಬಿಚ್ಚದ್ರೆ ಹುಷಾರ್ ಎಂದು ತಾಕೀತು ಮಾಡಿದರು. ವಿವಿಧ ಪ್ರಕರಣಗಳಲ್ಲಿ ಭಾಗಿಯಾದವರಿಗೆ ತಿಳಿ ಹೇಳಲಾಗಿದೆ. ಇದಕ್ಕೆ ಅವರು ಕೂಡ ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅಲ್ಲದೇ ಅವರು ಕೂಡ ಇನ್ನೊಮ್ಮೆ ಈ ರೀತಿಯ ತಪ್ಪುಗಳನ್ನು ಮಾಡುವುದಿಲ್ಲ ಎಂದು ಹೇಳಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಠಾಣೆಯ ಪೊಲೀಸ್ ಅಧಿಕಾರಿಗಳುಮತ್ತು ಸಿಬ್ಬಂದಿ ಭಾಗಿಯಾಗಿದ್ದರು.