ಆಧುನಿಕ ಜೀವನಶೈಲಿಯಿಂದಾಗಿ ಗುಬ್ಬಚ್ಚಿಗಳ ಸಂತತಿ ನಶಿಸಿ ಹೋಗುತ್ತಿದ್ದು, ಇದರ ಸಂರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕೆಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಂಜುನಾಥ್ ಚೌಹಾನ್ ಹೇಳಿದರು.

ಬೆಳಗಾವಿಯಲ್ಲಿ ಇಂದು ಕರ್ನಾಟಕ ಸರ್ಕಾರದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರಿ ಪಾಲಿಟೆಕ್ನಿಕ್’ನ ವತಿಯಿಂದ ವಿಶ್ವ ಗುಬ್ಬಚ್ಚಿ ದಿನ-2025ನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾಂಶುಪಾಲರಾದ ವಾಸುದೇವ ಅಪ್ಪಾಜಿಗೋಳ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಳಗಾವಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಂಜುನಾಥ್ ಚೌಹಾನ್, ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಭೀಮಾಶಂಕರ ಗುಳೇದ್, ಪಕ್ಷಿಪ್ರೇಮಿ ಸಲಾಹುದ್ಧೀನ್, ತಿಮ್ಮಾಪುರ, ಮಹಾಂತೇಶ ಪಟಾತರ, ಸಂಗಮೇಶ್ ಪ್ರಭಾಕರ ಇನ್ನುಳಿದವರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಂಜುನಾಥ್ ಚೌಹಾನ್ ಅವರು ಮಾನವನ ಜೀವನಶೈಲಿ ಬದಲಾಗಿ ಕಾಂಕ್ರೀಟ್’ ಕಾಡುಗಳಿಂದಾಗಿ ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅಲ್ಲದೇ, ರಸಾಯನಗಳ ಬಳಕೆ ಜನರ ಮೇಲೂ ಮತ್ತು ಪ್ರಾಣಿ ಪಕ್ಷಿಗಳ ಮೇಲೂ ಬೀರುತ್ತಿದೆ. ಟಾವರ್’ಗಳ ಹೆಚ್ಚಿದ ಸಂಖ್ಯೆಯಿಂದಲೂ ಗುಬ್ಬಚ್ಚಿಗಳ ಸಂತತಿ ನಶಿಸಿ ಹೋಗುತ್ತಿದೆ. ರಣ ಹದ್ದುಗಳ ಸಂತತಿಯೂ ಕೂಡ ಈಗ ಹೆಚ್ಚಾಗಿ ಕಾಣುವುದಿಲ್ಲ ಎಂದರು.
ಇನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಭೀಮಾಶಂಕರ ಗುಳೇದ ಅವರು, ನಮ್ಮ ಪರಿಸರ ಮತ್ತು ಪ್ರಾಣಿ ಪಕ್ಷಿಗಳ ಕುರಿತು ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಬೇಸಿಗೆಯ ಕಾಲದಲ್ಲಿ ಈ ಗುಬ್ಬಚ್ಚಿ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಬೇಸಿಗೆಯಲ್ಲಿ ಉಷ್ಣತೆಯಿಂದ ಮನುಷ್ಯರಂತೆ ಪ್ರಾಣಿ ಪಕ್ಷಿಗಳು ಕೂಡ ಬಾಯಾರಿಕೆಯಿಂದ ಬಳುತ್ತವೆ. ಆದ್ದರಿಂದ ಅವುಗಳಿಗೂ ನೀರಿನ ಪಾತ್ರೆ ಮತ್ತು ದವಸ ಧಾನ್ಯಗಳನ್ನು ಇಟ್ಟು, ಪಕ್ಷಿಗಳ ಸಂಗೋಪನೆಗೆ ಮುಂದಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ವೇಳೆ ಪಕ್ಷಿ ಪ್ರೇಮಿಗಳು ಮತ್ತು ವಿದ್ಯಾರ್ಥಿಗಳು ಇನ್ನುಳಿದವರು ಭಾಗಿಯಾಗಿದ್ಧರು.