ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದ ಬಳಿ ಮರಕ್ಕೆ ಕ್ರೂಸರ್ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದವರ ಪೈಕಿ ಇದೀಗ ಮತ್ತಿಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದು, ಸಾವಿನ ಸಂಖ್ಯೆ ಮೂವರು ಏರಿಕೆಯಾಗಿದೆ.

ಕಳೆದ ಶನಿವಾರ ಸಂಜೆ ಧಾರವಾಡದ ಕಲಕೇರಿ ಗ್ರಾಮಕ್ಕೆ ಅಂತ್ಯಕ್ರಿಯೆಗೆ ತೆರಳುವ ವೇಳೆ ಕ್ರೂಸರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಕ್ಯಾರಕೊಪ್ಪ ಗ್ರಾಮದ ಬಳಿ ಮರ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ ಧಾರವಾಡ ಹೊಸಯಲ್ಲಾಪುರ ನಿವಾಸಿ ಶಾಂತವ್ವಾ ನೀರಕಟ್ಟಿ ಚಿಕಿತ್ಸೆ ಫಲಿಸದೆ ಕಳೆದ ದಿನ ತಡ ರಾತ್ರಿ ಆಸ್ಪತ್ರೆಯಲ್ಲಿ ನೀಧನ ಹೊಂದಿದ್ದರು. ಇಂದು ಅದೇ ಏರಿಯಾದ ಗಂಭೀರವಾಗಿ ಗಾಯಗೊಂಡಿದ್ದ ಮತ್ತಿಬ್ಬರು ಚಿಕಿತ್ಸೆ ಫಲಿಸದೆ ಸಾವನಪ್ಪಿದ್ದಾರೆ. ಮಂಜುಳಾ ವನಹಳ್ಳಿ ಹಾಗೂ ರವಿ ಮಡಿವಾರ ಮೃತರಾಗಿದ್ದಾರೆ. ಹೊಸಯಲ್ಲಾಪುರ ಹಾಗೂ ಕೋಳಿಕೇರಿಯ ಸುಮಾರು 14 ಜನ ಕ್ರೂಸರ್ ತೆಗೆದುಕೊಂಡು ಕಲಕೇರಿಗೆ ಮಹಿಳೆಯೊಬ್ಬರ ಶವ ಸಂಸ್ಕಾರಕ್ಕೆಂದು ಹೊರಟಿದ್ದರು. ಈ ವೇಳೆ ಭೀಕರ ರಸ್ತೆ ಅಪಘಾತವಾಗಿ 4 ನಾಲ್ವರಿಗೆ ಗಂಭೀರವಾಗಿ ಗಾಯಗೊಂಡಿದ್ದರು. ಕೆಲವರನ್ನು ಹುಬ್ಬಳ್ಳಿ ಕಿಮ್ಸ್ ಹಾಗೂ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಳೆದ ದಿನ ಓರ್ವ ಮಹಿಳೆ ಹಾಗೂ ಇಂದು ಇಬ್ಬರು ಈ ಘಟನೆಯಲ್ಲಿ ನಿಧನರಾಗಿದ್ದು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಒಟ್ಟಾರೆ ಅಂತ್ಯಕ್ರಿಯೆಗೆಂದು ಹೊರಟಿದ್ದವರನ್ನೇ ಜವರಾಯ ತನ್ನ ಬಳಿ ಕರೆದುಕೊಂಡು ಹೋಗಿದ್ದಾನೆ. ಈ ಅಪಘಾತದಲ್ಲಿ ಇನ್ನೂ 4 ಜನ ಗಂಭಿರಗಾಯಾಳು ಹೊರತು ಪಡೆಸಿ 10 ಜನ ಜನ ಗಾಯಗೊಂಡಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.