Belagavi

ಕೇಂದ್ರ ಸಚಿವ ವಿ.ಸೋಮಣ್ಣಗೆ ಶ್ರೀ ವೀರಭದ್ರೇಶ್ವರ ಪ್ರಶಸ್ತಿಗೆ ಆಹ್ವಾನ

Share

ದೆಹಲಿ .ವೀರಶೈವ ‌ಲಿಂಗಾಯತ ಸಂಘಟನಾ ವೇದಿಕೆಯ ವತಿಯಿಂದ ಡಿ.12 ರಂದು ದೆಹಲಿಯ ಭಾರತ ಮಂಟಪದಲ್ಲಿ ಶ್ರೀ ವೀರಭದ್ರೇಶ್ವರ ಜಯಂತಿ ಮಹೋತ್ಸವ ಆಚರಿಸುತ್ತಿದ್ದು, ಪ್ರಸಕ್ತ ಸಾಲಿನ ವೀರಭದ್ರೇಶ್ವರ ರಾಷ್ಟ್ರೀಯ ಪ್ರಶಸ್ತಿಗೆ ಕೇಂದ್ರ ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣನವರನ್ನು ಆಯ್ಕೆ ಮಾಡಲಾಗಿದ್ದು, ವೀರಶೈವ ಲಿಂಗಾಯತ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ್ ಕಂಕನವಾಡಿಯವರ ನೇತೃತ್ವದಲ್ಲಿ ಕರ್ನಾಟಕದ ಮಠಾಧೀಶರು ಬುಧವಾರ ಸಚಿವರಿಗೆ ಆಹ್ವಾನ‌ ನೀಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ವಿ.ಸೋಮಣ್ಣ ಅವರಿಗೆ ಪ್ರಶಸ್ತಿ ದೊರಕಿರುವುದು ಅಭಿಮಾನದ ಸಂಗತಿ. ವೀರಭದ್ರೇಶ್ವರನ ಪರಮ ಭಕ್ತರು, ರಂಭಾಪುರಿ ಲಿಂಗೈಕೆ ವೀರ ಗಂಗಾಧರ ಭಗವತ್ಪಾದರ ಪರಮ ಶಿಷ್ಯರಾಗಿರುವ ಸೋಮಣ್ಣ ಅವರಿಗೆ ಈ ವರ್ಷದ ಪ್ರಶಸ್ತಿ ದೊರಕಿದ್ದು ಸಂತಸ ತಂದಿದೆ ಎಂದರು.
ವಿ.ಸೋಮಣ್ಣ ಅವರು ಆಮಂತ್ರಣ ಸ್ವೀಕರಿಸಿ ವೀರಭದ್ರೇಶ್ವರ ಪ್ರಶಸ್ತಿ ದೊರಕಿರುವುದು ನನ್ನ ಭಾಗ್ಯ. ಅದನ್ನು ಪ್ರೀತಿಯಿಂದ ಸ್ವಾಗತಿಸುತ್ತೇನೆ ಎಂದರು.
ಶ್ರೀ ಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀನಿ, ಶ್ರೀ ಚಿದಾನಂದ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವೀರಭದ್ರೇಶ್ವರ ಜಯಂತಿಯ ರಾಷ್ಟ್ರೀಯ ಅಧ್ಯಕ್ಷ ಬಾಗೋಜಿಕೊಪ್ಪದ ಶ್ರೀ ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ, ಶಂಕರಯ್ಯ ಶಾಸ್ತ್ರೀಗಳು, ಕಾಡಯ್ಯ ಶಾಸ್ತ್ರೀಗಳು, ರಮೇಶ ಕುಮಾರ ಶಾಸ್ತ್ರೀಗಳು, ಹೀರೆನಾಗಾವ, ಕಟ್ಟಿಮನಿ ಪಾಳ, ರಾಜೇಶ್ವರ, ಹಳ್ಳಿಕೇಡ್, ಬಸವ ಕಲ್ಯಾಣ ಶ್ರೀಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!