Belagavi

ಮಿಸಲಾತಿ ನೀಡದಿದ್ದರೆ ಸಮಾಜದ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಲೊಕಸಭಾ ಸದಸ್ಯ ಈರಣ್ಣಾ ಕಡಾಡಿ ಎಚ್ಚರಿಕೆ

Share

ಮೂಡಲಗಿ: ಲಿಂಗಾಯತ ಪಂಚಮಸಾಲಿ ಸಮಾಜದ 2ಎ ಮೀಸಲಾತಿಗೆ ಒತ್ತಾಯಿಸಿ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿರುವಂತಹ ಪಂಚಮಸಾಲಿ ಸಮಾಜದ ಸ್ವಾಮೀಜಿಗಳು, ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ರಾಜ್ಯ ಸರ್ಕಾರ ಮನಸೋ ಇಚ್ಛೆ ಹಲ್ಲೆ ಮಾಡಿ ಸಾಕಷ್ಟು ಜನರು ತೊಂದರೆಗೊಳಗಾಗಿದ್ದನ್ನು ಖಂಡಿಸಿ ಇವತ್ತು ಸ್ವಾಮೀಜಿಗಳ ಕರೆಯ ಮೇರೆಗೆ ರಾಜ್ಯಾದಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಕಲ್ಲೋಳಿ ಪಟ್ಟಣದ ಬಸವೇಶ್ವರ ಸರ್ಕಲ್‌ ನಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ನಮ್ಮ ಹಕ್ಕು. ಸಮಾಜದ ಜನರಿಗೆ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿಗೆ ಒತ್ತಾಯಿಸಿ ನಮ್ಮ ಹೋರಾಟ ನಡೆದಿದೆ. ಮುಂಬರುವ ದಿನಗಳಲ್ಲಿ ಯಶಸ್ವಿಯಾಗುತ್ತದೆ. ಒಗ್ಗಟ್ಟಿನಿಂದ ನಾವೆಲ್ಲರೂ ಸೇರಿ ಶಾಂತಿಯುತ ಹೋರಾಟ ಮಾಡೋಣ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಪ್ರತಿಭಟನಾಗಾರರಿಗೆ ಮನವಿ ಮಾಡಿದರು. ರಾಜ್ಯ ಸರ್ಕಾರ ಆದಷ್ಟು ಬೇಗ ಕ್ರಮ ತೆಗೆದುಕೊಳ್ಳದಿದ್ದರೇ ಸಾರ್ವಜನಿಕರ ಮತ್ತು ಸಮಾಜದ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಗೆ ನೀಡಿದರು.

ಪಂಚಮಸಾಲಿ ಸಮಾಜದ ಪ್ರಮುಖರಾದ ಬಸವರಾಜ ಕಡಾಡಿ, ಅಜೀತ ಬೆಳಕೂಡ, ಪ್ರಭು ಕಡಾಡಿ, ಸಿದ್ದಪ್ಪ ಮುಗಳಿ, ಭೀಮರಾಯ ಕಡಾಡಿ, ಸಿದ್ದಪ್ಪ ಖಾನಾಪೂರ, ಶಿವಾನಂದ ಹೆಬ್ಬಾಳ, ಧರೇಪ್ಪಾ ಖಾನಗೌಡ್ರ, ಮಲ್ಲಪ್ಪ ಹೆಬ್ಬಾಳ, ರಾಮಪ್ಪ ಹಡಗಿನಾಳ, ಶಂಕರ ಗೋರೋಶಿ, ಹಣಮಂತ ಕಡಾಡಿ, ಮುತ್ತೆಪ್ಪ ದಬಾಡಿ, ಭೀಮಶಿ ಹೆಬ್ಬಾಳ ಬಾಳಪ್ಪ ಮಟಗಾರ, ಶಂಕರ ಕಡಾಡಿ ಸೇರಿದಂತೆ ಪಂಚಮಸಾಲಿ ಸಮಾಜದ ಅನೇಕರು ಉಪಸ್ಥಿತರಿದ್ದರು.

Tags:

error: Content is protected !!