ಬೆಳಗಾವಿಯ ಮಾರ್ಕಂಡೇಯ ನಗರದಲ್ಲಿರುವ ಶ್ರೀ ಸ್ವಯಂಭೂ ಗಣೇಶ್ ಮಂದಿರದಲ್ಲಿ ಡಿಸೆಂಬರ್ 6 ರಂದು ಪ್ರತಿಷ್ಠಾಪಿಸಲಾಗುತ್ತಿರುವ ಶ್ರೀ ಮಹಾಲಕ್ಷ್ಮೀ ಮತ್ತು ಶ್ರೀ ಸರಸ್ವತಿ ದೇವಿಯ ನೂತನ ಮೂರ್ತಿಗಳ ಮೆರವಣಿಗೆಯನ್ನು ನಡೆಸಲಾಯಿತು.
ಇಂದು ಬೆಳಗಾವಿಯ ಸಂಗಮೇಶ್ವರ ನಗರ, ಎಪಿಎಂಸಿ ಮಾರ್ಗವಾಗಿ ಶ್ರೀ ಸ್ವಯಂಭೂ ಗಣೇಶ್ ಮಂದಿರದ ವರೆಗೆ ನೂತನ ಮೂರ್ತಿಗಳ ಮೆರವಣಿಗೆ ನಡೆಸಲಾಯಿತು.
ಮಾಜಿ ಉಪಮಹಾಪೌರ ಹಾಗೂ ನಗರ ಸೇವಕಿ ರೇಷ್ಮಾ ಪಾಟೀಲ್, ಪ್ರವೀಣ್ ಪಾಟೀಲ್ ಅವರು ಮೆರವಣಿಗೆ ಗೆ ಪೂಜೆ ನೆರವೇರಿಸಿ ಕ್ಷಮೆ ನೀಡಿದರು.
ಮಂದಿರದ ಸಂಸ್ಥಾಪಕ ಹಾಗೂ ಪೂಜಾರಿ ಶ್ರೀ ಮಲ್ಲಿಕಾರ್ಜುನ್ ಸತ್ತಿಗೆರಿ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಮಹಿಳೆಯರು ಪೂರ್ಣ ಕುಂಭ ಹೊತ್ತು, ಪಾರಂಪರಿಕ ವಾದ್ಯ ಮೇಳಗಳೊಂದಿಗೆ ಹೆಜ್ಜೆ ಹಾಕುತ್ತಾ ಮೆರವಣಿಗೆಯಲ್ಲಿ ಸಾಗಿದರು.