ಉದ್ದೇಶಪೂರ್ವಕವಾಗಿ ಯಾರಾದರೂ ಲಾಠಿಚಾರ್ಜ್ ಮಾಡ್ತಾರಾ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಕಾರ್ಮಿಕ ಸಚಿವ ಸಂತೋಷ ಲಾಡ್ ಕಿಡಿ ಕಾರಿದರು.
ಗುರುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕೇಂದ್ರದಲ್ಲಿ ಎಷ್ಟೋ ಜನ ರೈತರು ಅಸುನೀಗಿದ್ದಾರೆ. ಅವರ ಬಗ್ಗೆ ಜಯಮೃತ್ಯುಂಜಯ ಸ್ವಾಮೀಜಿ ಯಾಕೇ ಮಾತನಾಡಲ್ಲ.ಯಾವುದೇ ಸರ್ಕಾರ ಇರಲಿ ಉದ್ದೇಶಪೂರ್ವಕವಾಗಿ ಲಾಠಿ ಚಾರ್ಜ್ ಮಾಡಲ್ಲ. ಲಾಠಿ ಚಾರ್ಜ್ ಮಾಡಿದರೆ ನಮಗೆ ಏನು ಸಿಗುತ್ತದೆ. ಲಾಠಿಚಾರ್ಜ್ ಮಾಡಿದ್ರೇ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತಾ ಎಂದರು.
ಹಿಂದುಳಿದ ವರ್ಗದವರು ಪಂಚಮಸಾಲಿಗೆ ಮೀಸಲಾತಿ ನೀಡಬಾರದು ಎಂದು ಮನವಿ ವಿಚಾರಕ್ಕೆ ಟ್ವಿಟರ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ಮನವಿ ಟ್ಬಿಟ್ ಗೆ ಯತ್ನಾಳ ಟಾಂಗ್ ವಿಚಾರಕ್ಕೆ ಉತ್ತರಿಸಿದ ಅವರು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಏನಬೇಕು ಹೇಳಬಹುದು. ಪ್ರಜಾಪ್ರಭುತ್ವದಲ್ಲಿ ತಮಗೆ ಏನು ಬೇಕು ಕೇಳ್ತಾರೆ. ಉಲ್ಟಾ ಕೇಳ್ಕೊಂಡು ಹೋಗ್ತಾ ಹೋದ್ರೇ ಹೇಂಗೆ..? ಪಂಚಮಸಾಲಿ, ಲಿಂಗಾಯತ, ಹಿಂದೂತ್ವ ಎಂದು ನೀವು ಹೇಳ್ತೀರಿ. ಪಂಚಮಸಾಲಿ ಮೀಸಲಾತಿ ಕೇಳ್ತೀರಿ ಲಿಂಗಾಯತ ಸಮಾಜಕ್ಕೆ ಮೀಸಲಾತಿ ಬೇಡ್ವಾ..?
ಇದು ಎಂಡ್‌ಲೇಸ್ ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವ ಅವಕಾಶ ಇದೆ. ತಮಗೆ ಏನು ಬೇಕು ಕೇಳಬಹುದು ಆದ್ರೇ, ಒಬ್ಬರ ಮೇಲೆ ಒಬ್ಬರು ಟೋಪಿ ಹಾಕೋದಲ್ಲ ಎಂದು ಯತ್ನಾಳಗೆ ಟಾಂಗ್ ಕೊಟ್ಟರು. ನಾವೇರಲ್ಲೂ ಭಾರತೀಯರು, ಬಿಜೆಪಿ ಇರಲಿ ಕಾಂಗ್ರೆಸ್ ಇರಲಿ ನಾವು ಭಾರತೀಯರು. ನಾವು ದೇಶದವರಲ್ಲ, ದೇಶ ಬಿಟ್ಟು ಹೊರಗಿನವರಾ..? ಬಿಜೆಪಿ ಬಂದು ದೇಶ ಬೆಳೆಸಿ ಬಿಡ್ತಾ ಎಂದು ಕಿಡಿಕಾರಿದ ಅವರು, ರಾಜಕೀಯಕ್ಕಾಗಿ ತಪ್ಪಾಗಿ ಮಾತನಾಡಬಾರದು ಎಂದರು.