ಇಂದು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ 14 ನೇ ಘಟಿಕೋತ್ಸವ ಉತ್ಸಾಹದಲ್ಲಿ ನೇರವೇರಿತು. ಈ ವೇಳೆ ಪದವಿ ಹಾಗೂ ಪದಕ ಪಡೆದ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಹೇಳಿದ್ದೇನು ಬನ್ನಿ ನೋಡೋಣ…
ಇಂದು ಬೆಳಗಾವಿಯ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ 14 ನೇ ಘಟಿಕೋತ್ಸವ ಉತ್ಸಾಹದಲ್ಲಿ ನೇರವೇರಿತು. ಈ ವೇಳೆ ಪದವಿ ಹಾಗೂ ಪದಕ ಪಡೆದ ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕಾಗಿ ಹಾಕಿಕೊಂಡ ಯೋಜನೆಗಳನ್ನು ಬಿಚ್ಚಿಟ್ಟರು.
ರಾಜಕೀಯ ಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದ ಚಿಕ್ಕೋಡಿ ತಾಲೂಕಿನ ಕುಠಾಳಿ ಗ್ರಾಮದ ಮೀನಾಕ್ಷಿ ದಾವನೆ ಸರಕಾರಿ ಹುದ್ಧೆ ಪಡೆಯುವುದಾಗಿ ತಿಳಿಸಿದರು.
ಅಲ್ಲದೇ ಮೀನಾಕ್ಷಿಯನ್ನು ಕೂಲಿ ನಾಲಿ ಮಾಡಿ ಓದಿಸಿದ ತಂದೆ 5 ಮಕ್ಕಳಲ್ಲಿ ಇಬ್ಬರು ಸರಕಾರಿ ನೌಕರಿ ಹಿಡಿದಿದ್ದು, ಈಗ ಮೀನಾಕ್ಷಿ ಕೂಡ ಒಳ್ಳೆಯ ಸ್ಥಾನವನ್ನು ಅಲಂಕರಿಸಲಿ ಎಂದು ಹಾರೈಸಿದರು.
ಇನ್ನು ಮೆಥಮೆಟಿಕ್ಸ್ ಪಿಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿ ಮುಂದೆ ಸಿವಿಲ್ ಸರ್ವಿಸ್ ಪರೀಕ್ಷೆ ಬರೆಯುವುದಾಗಿ ತಿಳಿಸಿದರು. ಪ್ರತಿದಿನ 4-5 ಘಂಟೆಗಳ ಕಾಲ ಓದಿ, ಪಿಯುಸಿ ವಿದ್ಯಾರ್ಥಿಗಗಳಿಗೆ ಬೋಧನೆ ಮಾಡುತ್ತಿದೆ. ಈಗ ಚಿನ್ನದ ಪದಕ ಪಡೆದಿದ್ದು, ತಂದೆ ತಾಯಿಯ ಕೀರ್ತಿ ಹೆಚ್ಚಾಗಿದೆ ಎಂದರು.
ಇನ್ನು ಮಾಸ್ಟರ್ ಆಫ್ ಸೋಷಿಯಲ್ ವರ್ಕನಲ್ಲಿ ಮೊದಲ ರಾಂಕ್ ಪಡೆದ ಐಶ್ವರ್ಯ ಪಂಚಣ್ಣವರ ಅವರ ಈ ಸಾಧನೆಗೆ ತಂದೆ ತಾಯಿ, ಶಿಕ್ಷಕರು ಮತ್ತು ಸಹಪಾಠಿಗಳ ಸಹಯೋಗ ಹಿರಿದಾಗಿದೆ. ತಾವು ಮುಂದೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದಾಗಿ ತಿಳಿಸಿದರು.