Belagavi

ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವೋ… ಎಮರ್ಜೆನ್ಸಿಯಲ್ಲಿ ಇದ್ದೇವು ಗೊತ್ತಾಗುತ್ತಿಲ್ಲ…

Share

 

ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವೋ ಎಮರ್ಜೆನ್ಸಿಯಲ್ಲಿ ಇದ್ದೇವು ಗೊತ್ತಾಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಎರಡು ನಾಲಿಗೆ ಸರ್ಕಾರ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದರು.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಬಸವಣ್ಣನವರು ವಚನಗಳನ್ನ ಹೇಳುತ್ತಾರೆ. ಆದರೆ ಅನುಯಾಯಿಗಳ ಮೇಲೆ ಲಾಠಿ ಪ್ರಹಾರ ಮಾಡುತ್ತಾರೆ. ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವೋ ಅಥವಾ ಎಮರ್ಜೆನ್ಸಿಯಲ್ಲಿ ಇದ್ದೆವು ಗೊತ್ತಾಗುತ್ತಿಲ್ಲ ಎಂದರು.

ನಮ್ಮ ಸರ್ಕಾರದಲ್ಲಿ ಲಿಂಗಾಯತ ಹೋರಾಟವನ್ನು ನಾವು ತಡೆದಿಲ್ಲ. ಸಣ್ಣ ಗಲಾಟೆಯೂ ಆಗದಂತೆ ಕ್ರಮ ವಹಿಸಿದ್ದೇವೆ. ಅವರಿಗೆ ಮೀಸಲಾತಿ ಕೊಟ್ಟಿದ್ದೇವೆ. ಆದ್ರೆ ಕಾಂಗ್ರೆಸ್ ಗಲಾಟೆ ಸೃಷ್ಟಿಸಿದೆ. ಅಮಾಯಕ ಲಿಂಗಾಯತರ ಮೇಲೆ ಹೀನಾಯವಾಗಿ ಹಲ್ಲೆ ಮಾಡಿದ್ದಾರೆ. ಇದೊಂದು ಅಕ್ಷಮ್ಯ ಅಪರಾಧ.ಇದುವರೆಗೂ ಯಾರು ಲಿಂಗಾಯಿತರ ಮೇಲೆ ಕೈ ಎತ್ತಿಲ್ಲ ಸಿದ್ದರಾಮಯ್ಯ ಮೊದಲ ಬಾರಿ ಕೈ ಎತ್ತಿದ್ದಾರೆ. ರಾಜ್ಯಾಧ್ಯಕ್ಷರು, ನಾರಾಯಣರಾವ್ ಸೇರಿ ಸ್ವಾಮೀಜಿಗಳನ್ನು ನೋಡೋಕೆ ಹೊರಟಿದ್ವಿ. ಈಗ ಏಕಾಏಕಿ ಅವರನ್ನು ಶಿಪಿಂಗ್ ಮಾಡಿದ್ದಾರೆ. ಹಲ್ಲೆಗಾದವರನ್ನು ನೋಡಲು ಅವಕಾಶ ಇಲ್ಲ. ರಾಜ್ಯದಲ್ಲಿ ಹಿಟ್ಲರ್ ರೀತಿ ಸರಕಾರ ನಡೆಯುತ್ತಿದೆ ಎಂದರು.

ಅಧಿವೇಶನದಲ್ಲಿ ಬಾಣಂತಿ, ಶಿಶು ಸಾವು, ರೇಷನಕಾರ್ಡ್ ಅವಾಂತರದ ಬಗ್ಗೆ ಚರ್ಚೆ ಆಗಬೇಕಿದೆ. ಆದರೆ ಸರಕಾರ ಅಧಿವೇಶನ ನಡೆಸಲು ಕೂಡ ಮೀನ ಮೇಷ ಎನಿಸ್ತಿದೆ. ಕೇಳಿದ್ರೆ ಸಬುಬಿನ ಮೇಲೆ ಸಬೂಬು ಹೇಳುತ್ತಿದ್ದಾರೆ ಎಂದರು.  ನಾವು ಲಿಂಗಾಯಿತರ ಮೇಲೆ ಲಾಠಿ ಖಂಡಿಸಿ ಹೋರಾಟ ಮಾಡುತ್ತೇವೆ. ಇದೊಂದು ತುಘಲಕ್ ಸರ್ಕಾರ. ವಿಧಾನಸಭೆಯಲ್ಲಿ ಇದರ ವಿರುದ್ಧ ಧ್ವನಿ ಎತ್ತುತ್ತೇವೆ ಎಂದರು.

Tags:

error: Content is protected !!