Belagavi

ಪರವಾನಗಿ ಭೂಮಾಪಕರ ಸೇವೆಯನ್ನು ಖಾಯಂಗೊಳಿಸಿ…

Share

ಕರ್ನಾಟಕ ಪರವಾನಗಿ ಭೂಮಾಪಕರ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಸುವರ್ಣ ಸೌಧದ ಎದುರು ಪ್ರತಿಭಟನೆ ನಡೆಸಲಾಯಿತು. ಇಂದು ಸುವರ್ಣ ಸೌಧದ ಎದುರು ಪ್ರತಿಭಟನೆ ನಡೆಸಿದ ಕರ್ನಾಟಕ ಭೂಮಾಪಕರ ಸಂಘದ ಸದಸ್ಯರು ವಿವಿದ ಬೇಡಿಕೆಗಳಿಗೆ ಆಗ್ರಹಿಸಿ ಸರ್ಕಾರಕ್ಕೆ ಮನವಿಯನ್ನ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಂಘದ ಉಪಾಧ್ಯಕ್ಷ ಎಸ್ ಕೆ ಗಂಗಾಧರ್, ಕಳೆದ 21 ವರ್ಷಗಳಿಂದ ಪರವಾನಗಿ ಭೂಮಾಪಕರು ಸರ್ಕಾರದಿಂದ ಯಾವುದೇ ಸಂಬಳ ಪಡೆಯದೆ ಭತ್ಯೆ ಪಡೆಯದೆ, ಸರ್ಕಾರ ನೀಡಿರುವ ಜವಾಬ್ದಾರಿಯನ್ನ ನೀಗಿಸಿಕೊಂಡು ಬಂದಿದ್ದೇವೆ. ಲಕ್ಷಾಂತರ ಫೋಡಿ ಕೆಲಸಗಳನ್ನು ಮಾಡಿದ್ದೇವೆ. ಆದ್ದರಿಂದ ಸರ್ಕಾರ ನಮಗೆ ಕನಿಷ್ಠ ವೇತನ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಸೇವಾ ಭದ್ರತೆ ನೀಡಿ ಸೇವಾ ಖಾಯಂಮಾತಿಯನ್ನು ಮಾಡಬೇಕೆಂದು ಅಗ್ರಹಿಸಿದರು.

ಇನ್ನು ಮಹಿಳಾ ಭೂಮಾಪಕರು ಮಾತನಾಡಿ ಅಡವಿಯಂಚಿನಲ್ಲಿ ಭೂಮಾಪನ ಮಾಡುವ ವೇಳೆ ಯಾವುದೇ ರೀತಿಯ ಭದ್ರತೆ ಇರುವುದಿಲ್ಲ. ಪರವಾನಗಿ ಭೂಮಾಪಕರಿಗೆ ಸೇವಾಭದ್ರತೆ ನೀಡಬೇಕು. ಕನಿಷ್ಠ ವೇತನ ನೀಡಬೇಕು. ಪರವಾನಗಿ ಭೂಮಾಪಕರನ್ನು ಖಾಯಂಗೊಳಿಸಬೇಕೆಂದು ಒತ್ತಾಯಿಸಿದರು. Byte
ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಪರವಾನಗಿ ಭೂಮಾಪಕರು ಭಾಗಿಯಾಗಿದ್ದರು.

ಕನಿಷ್ಠ ವೇತನ ಸೇವಾ ಭದ್ರತೆ ಸಮಾನ ಕೆಲಸಕ್ಕೆ ಸಮಾನ ವೇತನ ಸೇವಾ ಖಾಯಂಮತಿ

Tags:

error: Content is protected !!