ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆ ಆಗಬೇಕೆಂದು ನಾವೀಗ ಇಲ್ಲಿ ಬಂದಿದ್ದೇವೆ. ನಮ್ಮ ಪಕ್ಷ ಹಾಗೂ ವಿರೋಧ ಪಕ್ಷದ ಜನಪ್ರತಿನಿಧಿಗಳಿಗೆ ನಾವು ಮನವಿ ಮಾಡುತ್ತೇವೆ. ಉತ್ತರ ಕರ್ನಾಟಕದ ಏನೇ ವಿಚಾರ ಪ್ರಸ್ತಾವ ಮಾಡೋದಿದ್ದರೂ ಮಾಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಮನವಿ ಮಾಡಿದರು.
ಗುರುವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪಂಚಮಸಾಲಿ ಹೋರಾಟದ ವೇಳೆ ಪ್ರತಿಭಟನಾಕಾರರ ಮೇಲೆ ಪೊಲೀಸರ ಲಾಠಿ ಪ್ರಹಾರ ವಿಚಾರಕ್ಕೆ ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಟ ಮಾಡುವ ಹಕ್ಕಿದೆ. ಕಾನೂನು ಚೌಕಟ್ಟಿನಲ್ಲಿ, ನ್ಯಾಯಬದ್ದವಾಗಿ, ಸಂವಿಧಾನ ರಕ್ಷಣೆ ಮಾಡಿಕೊಂಡು, ಆದೇಶಗಳನ್ನು ಪಾಲನೆ ಮಾಡಿದರೆ ಬಹಳ ಸಂತೋಷವೆಂದರು. ಇದೇ ವೇಳೆ ಲಿಂಗಾಯತ ವಿರೋಧಿ ಕಾಂಗ್ರೆಸ್ ಸರ್ಕಾರವೆನ್ನುವ ಆರೋಪ ಪ್ರಶ್ನೆಗೆ ಉತ್ತರಿಸದೇ ಡಿ.ಕೆ.ಶಿವಕುಮಾರ ತೆರಳಿದರು.