ಬಂಜಾರಾ ಸಮಾಜ ಬಾಂಧವರು ಒಂದಾಗಿ ತಮ್ಮ ಸಮಸ್ಯೆ ಹಾಗೂ ಅನ್ಯಾಯದ ವಿರುದ್ಧ ಹೋರಾಡಬೇಕೆಂದು ವಿಧಾನಸಭೆಯ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಕರೆ ನೀಡಿದರು.
ಬೆಳಗಾವಿ ಜಿಲ್ಲಾ ಬಂಜಾರ ಸಮಾಜದ ಚಿಂತನ ಸಭೆ ಹಾಗೂ ಶ್ರೀ ದುರ್ಗಾದೇವಿ ಮತ್ತು ಶ್ರೀ ಸೇವಾಲಾಲ ಸಾಪ್ತಾಹಿಕ ಜನ ಸೇವಾ ಸಂಘ ಬೆಳಗಾವಿ ವತಿಯಿಂದ ಚಿಂತನ ಸಭೆಯನ್ನು ವಿಧಾನಸಭೆಯ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು ಬಂಜಾರಾ ಸಮಾಜ ಬಾಂಧವರು ಒಗ್ಗಟ್ಟಿನಿಂದ ಇರಬೇಕು. ತಮ್ಮ ಸಮಸ್ಯೆ ಹಾಗೂ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಧ್ವನಿ ಎತ್ತಬೇಕು ಎಂದರು.
ಈ ವೇಳೆ ಮನೋಹರ್ ರೀನಾಪುರ್ ಜೈ ದೇವ ನಾಯಕ್ ಪಾಂಡುರಂಗ ಪಮ್ಮಾರ್ ಬಾಬು ಹೊನನಾಯಕ್, ಬಿ.ಸಿ ಚೌಹಾನ್, ಮಾಣಪ್ಪ ರಾಥೋಡ್,ಪಾಂಡುರಂಗ ನಾಯಕ್,ಕೃಷ್ಣ ರಾಥೋಡ್, ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಮಾಜ ವತಿಯಿಂದ ರುದ್ರಪ್ಪ ಲಮಾಣಿ ಅವರನ್ನು ಗೌರವಿಸಿದರು ಕಾರ್ಯಕ್ರಮದ ಪೂರ್ವದಲ್ಲಿ ಸನ್ಮಾನ್ಯ ಶ್ರೀ ಎಸ್ಎಂ ಕೃಷ್ಣ ರವರ ಭಾವಚಿತ್ರಕ್ಕೆ ಪೂಜಿಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು