ಪಂಚಮಸಾಲಿಗರ ನ್ಯಾಯಯುತ ಹೋರಾಟವನ್ನು ಹತ್ತಿಕ್ಕುವ ಕೆಲಸ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಧಾರವಾಡ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಖಾರವಾಗಿ ನುಡಿದರು.
ಅವರು ಇಂದು ಸುವರ್ಣಸೌಧದಲ್ಲಿ ನಮ್ಮ ಇನ್ ನ್ಯೂಜನ ವರದಿಗಾರ ರಾಜು ಬಾಗಲಕೋಟಿ ಯವರ ಪ್ರಶ್ನೆಗೆ ಪ್ರತಿಕ್ರಿಯಿಸಿ ಶಾಂತಿಯುತವಾಗಿ ಪಂಚಮಸಾಲಿಗರು ತಮಗೆ ನ್ಯಾಯ ಸಿಗುತ್ತಿಲ್ಲವೆಂದು ಹೋರಾಟ ಮಾಡುವಾಗ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಪೋಲಿಸ್ ರಿಂದ ಲಾಠಿ ಚಾರ್ಜ ಮಾಡಿಸಿ, ಸ್ವಾಮಿಜಿಗಳಿಗೆ ಧಕ್ಕೆ ತರುವ ಕೆಲಸ ಮಾಡಿದೆ. ಇದನ್ನು ನಾವು ಖಂಡಿಸುತ್ತೆವೆ. ಕೂಡಲೇ ಸಿಎಂ ಹೋರಾಟಗಾರರ ಕ್ಷಮೆ ಕೇಳಿ ೨ ಎ ಮಿಸಲಾತಿ ನೀಡಬೇಕು ಎಂದು ಆಗ್ರಹಿಸಿದರು.