ಬಿಜೆಪಿ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠ ಬೆಳಗಾವಿ ಮಹಾನಗರ ಜಿಲ್ಲೆ ವತಿಯಿಂದ ಗಾಂಜಾ ಮತ್ತು ಮಾದಕ ವಸ್ತುಗಳ ಅನಧಿಕೃತ ಮಾರಾಟವನ್ನು ನಿಷೇಧಿಸಬೇಕೆಂದು ಪೊಲೀಸ್ ಆಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತು.
ಬೆಳಗಾವಿ ಮಹಾನಗರ ಪೋಲಿಸ್ ಆಯುಕ್ತರಾದ ಯಡಾ ಮಾರ್ಟಿನ್ ಮಾರ್ಬನಾಂಗ ಮತ್ತು ಸಹಾಯಕ ಪೋಲಿಸ್ ಆಯುಕ್ತರು ರೋಹನ್ ಜಗದೀಶ್ ಅವರಿಗೆ ಮನವಿಯನ್ನು ಸಲ್ಲಿಸಿ, ಅನಧಿಕೃತ ಮಾದಕ ವಸ್ತುಗಳ ಮಾರಾಟ ಜಾಲ ಪತ್ತೆ ಹಚ್ಚಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಚರ್ಚಿಸಲಾಯಿತು.
ಉಪ ಪೊಲೀಸ್ ಆಯುಕ್ತರಾದ ರೋಹನ್ ಜಗದೀಶ ಅವರು ತಕ್ಷಣವೇ ಸಂಬಂಧಪಟ್ಟ ಪೊಲೀಸ್ ಇಲಾಖೆಯವರಿಗೆ ಆದೇಶ ನೀಡುವುದರೊಂದಿಗೆ ಅನಧಿಕೃತವಾಗಿ ನಡೆಯುತ್ತಿರುವ ಮಾರಾಟ ಮಳಿಗೆಗಳಿಗೆ ತನಿಖೆ ನಡೆಸಲು ಆದೇಶಿಸಿದರು. ಸಾರ್ವಜನಿಕರು ಇಂತಹ ಘಟನೆಗಳನ್ನು ಪೊಲೀಸ್ ಇಲಾಖೆಗೆ ತಕ್ಷಣ ತಿಳಿಸಿ ನಿಯಂತ್ರಿಸಲು ಸಹಕರಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮಹಾನಗರದ ಪ್ರಧಾನ ಕಾರ್ಯದರ್ಶಿಗಳಾದ ಈರಯ್ಯ ಖೋತ್, ಮಹಾದೇವಿ ಹಿರೇಮಠ್ ಸಂಯೋಜಕರು ಜಿಲ್ಲಾ ಪ್ರಕೋಸ್ಟ, ಜ್ಯೋತಿ ಶೆಟ್ಟಿ ಸದಸ್ಯರು ರಾಜ್ಯ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠ , ಚೇತನ್ ಕಟ್ಟಿ ಸಂಚಾಲಕರು ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠ ಬೆಳಗಾವಿ, ನಾಗರಾಜ್ ಪಾಟೀಲ್ ಸಂಯೋಜಕರು ಜಿಲ್ಲಾ ಪ್ರಕೋಷ್ಠ, ಮಹದೇವ ದರೆನವರ್ ಅಧ್ಯಕ್ಷರು ಯುವ ಮೋರ್ಚಾ, ವಿನೋದ್ ಲಂಗೋಟಿ ಕಾರ್ಯದರ್ಶಿಗಳು ಉತ್ತರ ಮಂಡಲ, ವಿಜಯ್ ಭದ್ರ ಉಪಾಧ್ಯಕ್ಷರು ಉತ್ತರ ಮಂಡಲ, ಚೇತನ್ ಬಡಿಗೇರ್ ಕಾರ್ಯದರ್ಶಿಗಳು ಯುವ ಮೋರ್ಚಾ, ಮಂಜುಳ ರಾಜಮನೆ ಇನ್ನುಳಿದವರು ಭಾಗಿಯಾಗಿದ್ದರು.