Uncategorized

ಸತೀಶ ಪ್ರತಿಭಾ ಪುರಸ್ಕಾರ ನ 23, 24 ರಂದು ಆಯೋಜನೆ – ಕಿರಣ ರಜಪೂತ

Share

ಹುಕ್ಕೇರಿ ತಾಲೂಕಿನ ಯಮಕನಮರ್ಡಿಯ ನಗರದ ಎನ್ ಎಸ್ ಎಫ್ ಶಾಲೆ ಆವರಣದಲ್ಲಿ ನವೆಂಬರ 23,24 ರಂದು ಸಾಯಂಕಾಲ 5 ಘಂಟೆಗೆ ಸತೀಶ ಜಾರಕಿಹೋಳಿ ಫೌಂಡೇಶನ್ ವತಿಯಿಂದ 11 ನೇಯ ಸತೀಶ ಪ್ರತಿಭಾ ಪುರಸ್ಕಾರ ಹಮ್ಮಿಕೋಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಕಿರಣ ರಜಪೂತ ಹೇಳಿದರು.

ಅವರು ಇಂದು ಯಮಕನಮರ್ಡಿ ಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ನವೆಂಬರ 23 ಮತ್ತು 24 ರಂದು ಯಮಕನಮರ್ಡಿ ಎನ್ ಎಸ್ ಎಫ್ ಶಾಲಾ ಆವರಣದಲ್ಲಿ ಬೃಹದಾಕಾರದ ವೇದಿಕೆಯಲ್ಲಿ ನಿಡಸೋಸಿಯ ಸಿದ್ದಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಎರಡು ದಿನಗಳ ವರೇಗೆ ಕಾರ್ಯಕ್ರಮಗಳು ಜರುಗಲಿದ್ದು ಸ್ಪರ್ಧೆಗಳಲ್ಲಿ ಸುಮಾರು 824 ವಿದ್ಯಾರ್ಥಿಗಳು ಬಾಗವಹಿಸಲಿದ್ದು ಸಮಾರೋಪ ಸಮಾರಂಭದಲ್ಲಿ ಯಮಕನಮರ್ಡಿ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 6 ಸಾಧಕರಿಗೆ ಸನ್ಮಾನ ಸೇರಿದಂತೆ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿಯವರ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದರು

ಈ ಸಂದರ್ಭದಲ್ಲಿ ಸುರೇಶ ಜೋರಾಪುರೆ, ಈರಣ್ಣಾ ಬಿಸಿರೋಟ್ಟಿ, ದಸ್ತಗೀರ ಬಸ್ಸಾಪೂರೆ, ರಿಯಾಜ ಚೌಗಲಾ, ಗೋವಿಂದ ದೀಕ್ಷೀತ, ಶಶಿಕಾಂತ ಹಟ್ಟಿ, ಶಿವಗೌಡ ಅತ್ಯಾಳಿ, ಗೀರಿಶ ಮಿಶ್ರಕೋಟಿ, ರಾಜು ಮಾರ್ಯಾಳಿ, ಗುಲಾಬಸಿಂಗ ರಜಪೂತ ಉಪಸ್ಥಿತರಿದ್ದರು.

ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!