Uncategorized

ಅರ್ಧಕ್ಕೆ ನಿಂತ ನಾಲಾ ಕಾಮಗಾರಿಯನ್ನು ಮಳೆಗಾಲದೊಳಗೆ ಪೂರ್ಣಗೊಳಿಸಿ…

Share

ಬೆಳಗಾವಿಯ ವಡಗಾಂವನ ಮೂಲಕ ಹಾಯ್ದು ಹೋಗುತ್ತಿರುವ ನಾಲಾ ಕಾಮಗಾರಿಗೆ ವಿರೋಧ ವ್ಯಕ್ತಪಡಿಸದಿರಿ. ಮಳೆಗಾಲದ ಮೊದಲೇ ಕೇವಲ ಶೇ 10 ರಷ್ಟು ಬಾಕಿಯಿರುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ವಡಗಾಂವ ಆನಂದ ನಗರ ರಹಿವಾಸಿ ಸಂಘದ ವತಿಯಿಂದ ಆಗ್ರಹಿಸಲಾಯಿತು.

ಇಂದು ಬೆಳಗಾವಿಯ ಮಹಾನಗರ ಪಾಲಿಕೆಗೆ ಆಗಮಿಸಿ ಉಪಾಯುಕ್ತರಾದ ಉದಯಕುಮರ್ ತಳವಾರ ಮತ್ತು ಅಭಿಯಂತೆ ಲಕ್ಷ್ಮೀ ನಿಪ್ಪಾಣಿಕರ ಅವರ ಮುಂದೆ ವಡಗಾಂವ ಆನಂದ ನಗರ, ಅನ್ನಪೂರ್ಣೆಶ್ವರಿ ನಗರ ಮತ್ತು ಕೇಶವ ನಗರದ ನಗರದ ರಹಿವಾಸಿಗಳು ನಾಲಾ ಕಾಮಗಾರಿ ಅರ್ಧಕ್ಕೆ ನಿಂತಿದ್ದರಿಂದ ಎದುರಾಗುತ್ತಿರುವ ಸಮಸ್ಯೆಗಳನ್ನು ಗಮನಕ್ಕೆ ತಂದು, ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ನಗರಸೇವಕಿ ಸಾರೀಕಾ ಪಾಟೀಲ್ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಿದರು.

ಈ ವೇಳೆ ಮಾತನಾಡಿದ ರಹಿವಾಸಿಗಳು ಕೆಲ ಜನರು ಮ್ಯಾಪಿನಲ್ಲಿ ನಾಲೆಯಿಲ್ಲವೆಂದು ವಿರೋಧ ವ್ಯಕ್ತಪಡಿಸಿದ್ದರಿಂದ ನಾಲೆಯ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದರಿಂದಾಗಿ ಅನಾಹುತಗಳು ಸಂಭವಿಸುವ ಸಾಧ್ಯತೆಗಳಿವೆ. ಬಾಂಡಿನ ಮೂಲಕ ಜಾಗೆಯನ್ನು ಖರೀದಿಸುವಾಗಲೇ, ನಾಲೆಯಿರುವುದಾಗಿ ಉಲ್ಲೇಖಿಸಲಾಗಿದೆ. ಮಳೆಗಾಲದಲ್ಲಿ ಗಂಭೀರ ಪರಿಸ್ಥಿತಿ ಎದುರಾಗುವ ಮೊದಲೇ ಯಾವುದೇ ರಾಜಕಾರಣವನ್ನು ಮಾಡದೇ ಅರ್ಧಕ್ಕೆ ನಿಂತ ಕಾಮಗಾರಿಯನ್ನು ಪೂರ್ಣಗೊಳಿಸಲೇಬೇಕು ಎಂದು ಒತ್ತಾಯಿಸಿದರು.

ನಾಲಾ ಕಾಮಗಾರಿ ಅರ್ಧಕ್ಕೆ ನಿಂತಿದ್ದರಿಂದ ಮನೆಗಳಿಗೆ ನೀರು ನುಗ್ಗಿ, ಪ್ರತಿವರ್ಷ ನಷ್ಟ ಉಂಟಾಗುತ್ತಿದೆ. ಅಲ್ಲದೇ ಜೀವಹಾನಿಯ ಭಯ ಕಾಡುತ್ತಿದೆ. ಪ್ರತಿಬಾರಿಯೂ ಅಧಿಕಾರಿಗಳು ಬಂದು ಮಳೆಗಾಲದಲ್ಲಿಂಟಾದ ಪರಿಸ್ಥಿತಿಯನ್ನು ಅವಲೋಕಿಸುತ್ತಿರಿ. ಆದರೂ ಕಾಮಗಾರಿಯನ್ನು ಪೂರ್ಣಗೊಳಿಸಿ ಸಮಸ್ಯೆಯನ್ನು ನೀಗಿಸಲು ವಿಳಂಬವೇಕೆ ಎಂದು ಪ್ರಶ್ನಿಸಿದರು. ನಮಗೆ ನಿಮ್ಮ ಜಾಗೆ ಬೇಡ ನಾಲೆಯ ಜಾಗೆಯನ್ನು ಮಾತ್ರ ನೀಡಿ. ಜನರ ಹಿತವನ್ನು ಕಾಯಬೇಕೆಂದು ರಹಿವಾಸಿಗಳು ಒತ್ತಾಯಿಸಿದರು.

ಇನ್ನು ಆನಂದ ನಗರ ನಾಲೆಯ ಸಮಸ್ಯೆ ಹಲವಾರು ವರ್ಷಗಳಿಂದ ಇದ್ದು ಪ್ರತಿಬಾರಿಯೂ ಮಳೆಗಾಲದಲ್ಲಿ ನೀರು ಮುಂದೆ ಸಾಗದೇ ಇಲ್ಲಿರುವ ಜನರ ಮನೆಗಳಿಗೆ ನುಗ್ಗುತ್ತಿದೆ. ಇದರಿಂದ ಜನ ಜಾನುವಾರುಗಳಿಗೆ ತೊಂದರೆಯುಂಟಾಗುತ್ತಿದೆ. ಹಲವಾರು ಬಾರಿ ಮನವಿ ಸಲ್ಲಿಸಿದರೂ ಪಾಲಿಕೆ ಮಾತ್ರ ಕ್ರಮಕೈಗೊಳ್ಳುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ವಡಗಾಂವ ಆನಂದ ನಗರದ ರಹಿವಾಸಿಗಳು ಭಾಗಿಯಾಗಿದ್ಧರು.

Tags:

error: Content is protected !!