Belagavi

ಕೊಣ್ಣೂರಿನಲ್ಲಿ ಮಿತಿಮೀರಿದ ಬೀದಿ ನಾಯಿಗಳ ಹಾವಳಿ

Share

ಗೋಕಾಕ ತಾಲೂಕಿನ ಕೊಣ್ಣೂರ ಪುರಸಭೆಯ ವ್ಯಾಪ್ತಿಯಲ್ಲಿ ಹಲವಾರು ಒಣಿಗಳಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮಿರಿದ್ದರಿಂದ ಇಲ್ಲಿನ ಜನರು,
ವಯೋವೃದ್ದರು ಮತ್ತು ಶಾಲಾ ಮಕ್ಕಳು ಜೀವ ಭಯದಲ್ಲಿ ತಿರುಗಾಡುವ ಪರಿಸ್ಥಿತಿ ಉಂಟಾಗಿದೆ.

ಕೊಣ್ಣೂರ,ಮಾನಿಕವಾಡಿ,ಮರಡಿಮಠಗಳಲ್ಲಿ ಸಾರ್ವಜನಿಕರಿಗೆ ಬೀದಿ ನಾಯಿಗಳ ಹಾವಳಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿವೆ. ಅಂಬೇಡ್ಕರ ನಗರದಲ್ಲಂತೂ ಬೀದಿ ನಾಯಿಗಳು ಗುಂಪುಗಳಲ್ಲಿ ಕಂಡು ಬರುತ್ತಿರುವುದರಿಂದ ಸಾರ್ವಜನಿಕರು ಸಂಚರಿಸಲು ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ,ಸಂಜೆಯ ವೇಳೆಗೆ ಕೆಲವು ನಾಯಿಗಳ ಗುಂಪು ಸಾರ್ವಜನಿಕರಿಗೆ ಕಾಟ ಕೊಡುತ್ತಿದ್ದು, ಚಿಕ್ಕಮಕ್ಕಳು ಹೊರಗಡೆ ಬರದಂತೆ ತಮ್ಮ ಮನೆಯ ಬಾಗಿಲುಗಳನ್ನು ಮುಚ್ಚಿಕೊಳ್ಳುತ್ತಿದ್ದಾರೆ.

ಬೀದಿ ನಾಯಿಗಳ ಈ ಪರಿ ಕಾಟಕ್ಕೆ ಬೇಸತ್ತಿರುವ ಸಾರ್ವಜನಿಕರು ಕೊಣ್ಣೂರ ಪುರಸಭೆಯ ಅಧಿಕಾರಿಗಳಿಗೆ ಬೀದಿ ನಾಯಿಗಳಿಗೆ ಕಡಿವಾಣ ಹಾಕಬೇಕು ಎಂದು ಹಲವಾರು ಬಾರಿ ಸ್ಥಳಿಯ ಪುರಸಭೆ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದರೂ ಸಹ ಬೀದಿ ನಾಯಿಗಳನ್ನು ಸ್ಥಳಾಂತರಿಸುವ ಕಾರ್ಯ ಮಾಡಿಲ್ಲ, ಇದರಿಂದ ದಿನದಿಂದ ದಿನಕ್ಕೆ ಕೊಣ್ಣೂರಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತಿದ್ದು ಯಾವಾಗ ಯಾರು ನಾಯಿಗಳಿಗೆ ಬಲಿ ಆಗುತ್ತಾರೊ ಗೊತ್ತಿಲ್ಲ,,

ಇನ್ನಾದರೂ ಕೊಣ್ಣೂರ ಪುರಸಭೆ ಅಧಿಕಾರಿಗಳು ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವ ಕಾರ್ಯ ಮಾಡುತ್ತಾರೋ ಎಂದು ಕಾದು ನೋಡಬೇಕಾಗಿದೆ.

Tags:

error: Content is protected !!