Belagavi

ಕಿತ್ತೂರು ಉತ್ಸವಕ್ಕೆ ಭರದಿಂದ ಸಿದ್ಧತೆ… ಸಿಎಂ ಸಿದ್ಧರಾಮಯ್ಯ ಭಾಗಿಯಾಗುವ ಸಾಧ್ಯತೆ; ಸಚಿವ ಸತೀಶ ಜಾರಕಿಹೊಳಿ

Share

ಕಿತ್ತೂರು ಉತ್ಸವಕ್ಕೆ ಭರದಿಂದ ಸಿದ್ಧತೆಗಳು ಜಾರಿಯಲ್ಲಿದ್ದು, ಸಿಎಂ ಸಿದ್ಧರಾಮಯ್ಯನವರು ಬರುವ ಸಾಧ್ಯತೆಯಿದೆ ಎಂದು ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ಅವರು ಇಂದು ಬೆಳಗಾವಿಯಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿದರು. ಕಿತ್ತೂರು ಉತ್ಸವಕ್ಕೆ ಸಿಎಂ ಅವರು ಬರುವ ಸಾಧ್ಯತೆಯಿದೆ. ಈ ಬಾರಿ 200ನೇ ವರ್ಷದ ಉತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತಿದ್ದು, ಕಲಾತಂಡ, ಸಾಹಿತಿಗಳು ಇನ್ನುಳಿದ ಕಲಾವಿದರನ್ನು ಆಹ್ವಾನಿಸಲಾಗಿದೆ. ಇನ್ನು ಏರ್ ಶೋ ಕುರಿತು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರ ಜೊತೆ ಮಾತನಾಡಲಾಗಿದೆ ಎಂದರು.

ಮಳೆ ನಿಂತ ಬಳಿಕ ನಗರದಲ್ಲಿ ಹದಗೆಟ್ಟ ರಸ್ತೆಗಳ ದುರಸ್ಥಿಯನ್ನ ಮಾಡಲಾಗುವುದು. ಇನ್ನು ರೇಲ್ವೆ ಮತ್ತು ಎಸ್.ಟಿ.ಪಿ ಯೋಜನೆಗಳನ್ನು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಲಾಗುವುದು. ರಿಂಗ್ ರೋಡ್ ಮತ್ತು ಬೈಪಾಸ್ ನಿರ್ಮಾಣದ ಉದ್ಧೇಶಗಳೇ ಬೇರೆಯಾಗಿವೆ. ಈಗಾಗಲೇ ರೈತರು ಕೋರ್ಟಿಗೆ ಹೋಗಿದ್ದು, ಕೋರ್ಟ ಕೂಡ ಆದೇಶ ಮಾಡಿದೆ. ಕಾಮಗಾರಿಯನ್ನು ಆರಂಭಿಸಲು ಜಿಲ್ಲಾಧಿಕಾರಿಗಳು ಸಭೆ ನಡೆಸಲಿದ್ದಾರೆ ಎಂದರು.  ಸಿ.ಪಿ.ಯೋಗೆಶ್ವರ ಎಂ.ಎಲ್.ಸಿ ಸ್ಥಾನಕ್ಕೆ ನೀಡಿದ್ದು, ಅವರ ವೈಯಕ್ತಿಕ ವಿಚಾರ. ಅವರು ಕಾಂಗ್ರೆಸಗೆ ಬರುತ್ತಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ಮೂರು ಕ್ಷೇತ್ರದಲ್ಲೂ ಗೆಲ್ಲಲು ಅವಕಾಶವಿದೆ ಎಂದರು.  ಬೆಳಗಾವಿಯಲ್ಲಿ ರಾಜ್ಯೋತ್ಸವಕ್ಕೆ ಅವಶ್ಯವಿದ್ದಲ್ಲಿ ವಿಶೇಷ ಅನುದಾನವನ್ನು ಕೊಡಿಸಿ, ಅದ್ಧೂರಿಯಾಗಿ ರಾಜ್ಯೋತ್ಸವವನ್ನು ಆಚರಿಸಲಾಗುವುದು ಎಂದರು.

ಈ ವೇಳೆ ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಮತ್ತು ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!