ಶ್ರೀಮತಿ ವಿನಯಾ ಯಶೋಧರ ಕೋಟಿಯನ್ ಸ್ಮರಣಾರ್ಥ ನಡೆಯಲಿರುವ ಕರ್ನಾಟಕ ಸ್ಟೇಟ್ ರ್ಯಾಂಕಿಂಗ್ ಟೂರ್ನಾಮೆಂಟ್ ಸ್ಪರ್ಧೆಗಾಗಿ ಬೆಳಗಾವಿ ಜಿಲ್ಲಾಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಬೆಳಗಾವಿನಗರದ ಬೆಲಗಾಮ್ ಕ್ಲಬ್ ನಲ್ಲಿ ಇಂದು ಭಾನುವಾರದಂದು ಬೆಳಗಾವಿ ಜಿಲ್ಲಾ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಮತ್ತು ಸಂಗಮ ಬೈಲೂರ್ ಬೆಲಗಾಮ್ ಟೇಬಲ್ ಟೆನ್ನಿಸ್ ಅಕಾಡೆಮಿಯ ವತಿಯಿಂದ ಕರ್ನಾಟಕ ಸ್ಟೇಟ್ ರ್ಯಾಕಿಂಗ್ ಟೂರ್ನಾಮೆಂಟಗಾಗಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಮುಖ್ಯ ಅತಿಥಿಗಳಾಗಿ ಮೆಟ್ರೋ ಕಾಸ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡನ ಸಂಚಾಲಕರಾದ ನಾಗೇಶ ಛಾಬ್ರಿಯಾ ಹಾಗೂ ಇನ್ನುಳಿದ ಗಣ್ಯರು ಉಪಸ್ಥಿತರಿದ್ಧರು. ಗಣ್ಯರ ಹಸ್ತದಿಂದ ಟೆಬಲ್ ಟೆನ್ನಿಸ್ ಸ್ಪರ್ಧೆಗೆ ಚಾಲನೆಯನ್ನು ನೀಡಲಾಯಿತು. 11 ಮತ್ತು 13 ವರ್ಷದೊಳಗಿನ ಕ್ರೀಡಾಳುಗಳಿಗಾಗಿ ನಡೆದ ಸ್ಪರ್ಧೆಯಲ್ಲಿ ಕ್ರೀಡಾಳುಗಳು ಉತ್ತಮ ಪ್ರದರ್ಶನ ನೀಡಿದರು.
ಉತ್ತಮ ಪ್ರದರ್ಶನ ನೀಡಿದ ಕ್ರೀಡಾಳುಗಳಿಗೆ ಗಣ್ಯರ ಹಸ್ತದಿಂದ ಪ್ರಮಾಣಪತ್ರವನ್ನು ವಿತರಿಸಲಾಯಿತು. ಈ ಕುರಿತು ಇನ್ ನ್ಯೂಸಗೆ ಹೆಚ್ಚಿನ ಮಾಹಿತಿಯನ್ನು ನೀಡಿದ ಸಂಗಮ ಬೈಲೂರ್ ಬೆಲಗಾಮ್ ಟೇಬಲ್ ಟೆನ್ನಿಸ್ ಅಕಾಡೆಮಿಯ ಸಂಗಮ ಬೈಲೂರ್ ಅವರು ಕಳೆದ 15 ವರ್ಷಗಳಿಂದ ಜಿಲ್ಲಾಮಟ್ಟದಲ್ಲಿ ಸ್ಪರ್ಧೆಗಳನ್ನು ಆಯೋಜಿಸಿ ಸ್ಪರ್ಧಾಳುಗಳನ್ನು ರಾಜ್ಯಮಟ್ಟದ ವರೆಗೆ ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಇನ್ನು ಟೆಬಲ್ ಟೆನ್ನಿಸ್ 13 ವರ್ಷದೊಳಗಿನ ವಿಭಾಗದ ನ್ಯಾಷನಲ್ ಇಂಡಿಯಾ ನಂ 1 ತನಿಷ್ಕಾ ಕಾಳಭೈರವ ಮಾತನಾಡಿ ತಮಗೆ ಚಿನ್ನದ ಪದಕ ದೊರೆತಿದ್ದು, ಇದೇ ಸೆಪ್ಟೆಂಬರ್ 10 ರಂದು ಹಿಮಾಚಲ ಪ್ರದೇಶದಲ್ಲಿ ನಡೆಯಲಿರುವ ಉಪಾಂತ್ಯಕ್ಕೆ ಆಯ್ಕೆಯಾಗಿರುವುದಾಗಿ ತಿಳಿಸಿದರು. ಅಲ್ಲದೇ ಓಲಂಪಿಕ್ಸನಲ್ಲಿ ಆಡುವ ತಮ್ಮ ಆಸೆಯನ್ನು ವ್ಯಕ್ತಪಡಿಸಿದರು. ಇನ್ನು ಕ್ರೀಡಾಳು ಕರ್ನಾಟಕ ಸ್ಟೇಟ್ ನಂ. 1 ಅಭಿನವ ಪ್ರಸನ್ನ
ಸುಚೇತ್, ಮತ್ತು ಸಾಕ್ಷಾ ಸಂತೋಷ ಕೂಡ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.
ಸ್ಪರ್ಧೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಸುಮಾರು 400 ಕ್ರೀಡಾಳುಗಳು ಭಾಗಿಯಾಗಿದ್ದರು.