ಬೆಳಗಾವಿ: 2024-25ನೇ ಸಾಲಿನ ಕ್ಲಸ್ಟರಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯೂ ಬೆಳಗಾವಿ ತಾಲೂಕಿನ ಹೊಸವಂಟಮೂರಿಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
2024-25ನೇ ಸಾಲಿನ ಕ್ಲಸ್ಟರಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯೂ ಬೆಳಗಾವಿ ತಾಲೂಕಿನ ಹೊಸವಂಟಮೂರಿಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಗುಗ್ರ್ಯಾನಟ್ಟಿ, ಸುತಗಟ್ಟಿ, ರಾಮದುರ್ಗ, ಗೋಡಿಹಾಳ, ಗುರಾಮಟ್ಟಿ ಸರ್ಕಾರಿ ಶಾಲೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು. ಪ್ರತಿಭಾ ಕಾರಂಜಿಗೆ ಗ್ರಾಮ ಪಂಚಾಯತ ಅಧ್ಯಕ್ಷ ಸಿದ್ದಪ್ಪ ಹೋಳಿಕಾರ, ಉಪಾಧ್ಯಕ್ಷೆ ಫಕೀರವ್ವ ಹಂಚಿನಮನಿ, ಜಂಗ್ಲಿಸಾಬ್ ನಾಯಿಕ, ಎಂ.ಎ.ಕೋರಿಶೆಟ್ಟಿ, ಇನ್ನುಳಿದ ಗಣ್ಯರು ಭಾಗಿಯಾಗಿದ್ಧರು.
ಈ ವೇಳೆ ವಿವಿಧ ಶಾಲೆಯ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.