Belagavi

ಹಾರೋಗೆರಿಯ ಈರಪ್ಪ ಚೌಗುಲಾ ಕೊಲೆ ಪ್ರಕರಣ : 8 ಜನ ಆರೋಪಿಗಳ ಬಂಧನ

Share

ವ್ಯವಸ್ಥಿತವಾಗಿ ಬಾಲ್ಯದಿಂದಲೂ ಕೂಡಿ ಬೆಳೆದ ಸಹೋದರನ್ನು ಅಪಹರಣ ಮಾಡಿ ಕೊಲೆ ಮಾಡಿದ ಘಟನೆಯನ್ನು ಹಾರೋಗೆರಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಹೇಳಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಜೂ.4 ರಂದು ಹಾರೋಗೆರಿಯ ಸುಲ್ತಾನಪುರ ಗ್ರಾಮದ ಈರಪ್ಪ ಚೌಗುಲಾ ಕಾಣೆಯಾಗಿದ್ದ ಎಂದು ಪ್ರಕರಣ ದಾಖಲಿಸಿದ್ದರು. ಆದರೆ ಬಾಗಲಕೋಟ ಜಿಲ್ಲೆಯಲ್ಲಿ ಶವವಾಗಿ ಪತ್ತೆಯಾಗಿತ್ತು. ನಮ್ಮ ಪೊಲೀಸರು ಎಲ್ಲ ಆಯಾಮದಿಂದ ತನಿಖೆ ನಡೆಸಿ ಕೊಲೆ ಮಾಡಿದ ಸಹೋದರ ಶ್ರೀಶೈಲ್ ಚೌಗುಲಾ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಸೇರಿದಂತೆ 8 ಜನರನ್ನು ಬಂಧಿಸಲಾಗಿದೆ ಎಂದರು.

ಬಾಗಲಕೋಟ ಜಿಲ್ಲೆಯ ಬಿಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈರಣ್ಣನ ಶವನ್ನು ಎಸೆದು ಪರಾರಿಯಾಗಲು ಯತ್ನಿಸಿದರು. ಸಹೋದರರ ನಡುವೆ ಜಮೀನಿನ ವಿಚಾರಕ್ಕೆ ಆಗಾಗ ಗಲಾಟೆ ನಡೆಯುತ್ತಿತ್ತು. ಒಂದು ಎಕರೆ ಜಮೀನು ಮಾರಾಟ ಮಾಡುವ ವಿಷಯದಲ್ಲಿ ಈರಣ್ಣ ಹಾಗೂ ಶ್ರೀಶೈಲ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಜಮೀನು ಮಾರಾಟ ಮಾಡಬಾರದು ಎನ್ನುವುದು ಶ್ರೀಶೈಲ್‌ನದ್ದಾಗಿದ್ದು, ಕೊಲೆ ಮಾಡಿದ ಸಹೋದರ ಶ್ರೀಶೈಲ್ ಸೇರಿದಂತೆ 8 ಜನರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದರು.

Tags:

error: Content is protected !!