Belagavi

ವೈದ್ಯರಲ್ಲಿ ತಾಳ್ಮೆ ಮುಖ್ಯ – ಡಾ. ಎನ್ ಎಸ್ ಮಹಾಂತಶೆಟ್ಟಿ

Share

ಇತ್ತೀಚಿನ ದಿನಗಳಲ್ಲಿ ಅಸಮತೋಲನ ಹೊಂದಿರುವವರ ಜನಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. 60 ವರ್ಷಗಳ ನಂತರ ಇದು ಸಾಮಾನ್ಯವಾಗಿದ್ದು ಎಂದು ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ ಹೇಳಿದರು .

ಕಾಹೆರ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಕಿವಿ, ಮೂಗು, ಗಂಟಲು ವಿಭಾಗ ದಿಂದ ಅಸಮತೋಲನ ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿತು .
ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ ಮಾತನಾಡಿ ಅಸಮತೋಲನ (ನಡೆದಾಡುವಲ್ಲಿನ ತೊಂದರೆ) ಹೊಂದಿರುವವರ ಜನಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. 60 ವರ್ಷಗಳ ನಂತರ ಇದು ಸಾಮಾನ್ಯವಾಗಿದ್ದು, ಕೆಲವು ಸಲ ಸುರಕ್ಷಿತವಾಗಿ ನಡೆಯಲು ಬೇರೊಬ್ಬರನ್ನು ಆಶ್ರಯಿಸಬೇಕಾಗುತ್ತದೆ.

ಆದ್ದರಿಂದ ಹಿರಿಯರಲ್ಲಿ ಕಂಡುಬರುವ ಈ ಸಮಸ್ಯೆಯನ್ನು ಹೋಗಲಾಡಿಸಲು ವೈದ್ಯರು ಸರಿಯಾದ ಚಿಕಿತ್ಸೆ ನೀಡುವದರೊಂದಿಗೆ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಸಮತೋಲನ ಬಹಳ ಮುಖ್ಯ. ತಲೆ ತಿರುಗುವಿಕೆಯಿಂದ ಯಾವುದೇ ಕಾರ್ಯ ಮಾಡಲು ಅಸಾಧ್ಯ. ಹಿರಿಯ ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಅವರ ಆರೈಕೆ ಸರಿಯಾದ ಕ್ರಮದಲ್ಲಿ ಮಾಡಬೇಕಾಗಿದೆ ವೈದ್ಯರಲ್ಲಿ ತಾಳ್ಮೆ ಮುಖ್ಯವಾಗಿರುತ್ತದೆ. ಹಿರಿಯ ನಾಗರೀಕರಲ್ಲಿ ಅಸಮತೋಲನ ಕಂಡು ಬಂದರೆ ಅವರನ್ನು ಮಗುವಂತೆ ಕಾಳಜಿವಹಿಸಬೇಕು.

ಅಲ್ಲದೇ ಇದರ ಕುರಿತು ಜಾಗೃತಿ ಮೂಡಿಸಬೇಕು. ಆವಿಷ್ಕಾರಗಳ ಮೂಲಕ ವೈದ್ಯಕೀಯ ವಿಜ್ಞಾನ ಜೈವಿಕ ತಂತ್ರಜ್ಞಾನದ ಭವಿಷ್ಯವಾಗಿದೆ, ಇದು ಅತ್ಯವಶ್ಯವಾಗಿದ್ದು, ವೈದ್ಯಕೀಯ ಸಲಕರಣೆ ತಯಾರಿಸುವ ಎಂಜಿನಿಯರ್ಗಳು ಖಂಡಿತವಾಗಿಯೂ ಪ್ರಯೋಜನ ಪಡೆಯುತ್ತಾರೆ. ಸಮುದಾಯಕ್ಕೆ ಸಹಾಯ ಮಾಡಬೇಕಾಗಿದೆ ಎಂದು ಅವರು ಹೇಳಿದರು.

Tags:

error: Content is protected !!