Belagavi

ಬೆಳಗಾವಿಗೆ ಹೊಸ ತ್ರಿಚಕ್ರ ವಾಹನಗಳ ಪರಿಚಯ…ಮಹಿಳೆಯರ ಆರ್ಥಿಕ ಮಟ್ಟ ಸುಧಾರಿಸಲು ಶಾಸಕ ಅಭಯ ಪಾಟೀಲ ಹೊಸ ಹೆಜ್ಜೆ

Share

ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರು ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸಲು ಮತ್ತು ಸ್ವಾವಲಂಬಿಯಾಗಿಸಲು ಹೊಸ ಹೆಜ್ಜೆಯೊಂದನ್ನು ಇಟ್ಟಿದ್ದು, ವಿಶೇಷವಾಗಿ ಮಹಿಳೆಯರಿಗೆ ತ್ರಿಚಕ್ರ ಪ್ಯಾಸೆಂಜರ್ ವಾಹನವನ್ನು ಪರಿಚಯಿಸಿದ್ದಾರೆ.

ಬೆಳಗಾವಿಯ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು. ಸ್ವಾವಲಂಬಿ ಜೀವನ ನಡೆಸಬೇಕು ಎಂಬ ಉದ್ಧೇಶದಿಂದ ದಕ್ಷಿಣ ಶಾಸಕ ಅಭಯ ಪಾಟೀಲ ಅವರು ಬೆಳಗಾವಿ ನಗರಕ್ಕೆ ಹೊಸ ತ್ರಿಚಕ್ರವಾಹನಗಳನ್ನು ಪರಿಚಯಿಸಿದ್ದಾರೆ. ಬೆಂಗಳೂರಿನ ಪ್ರಜ್ಞಾ ಆಟೋ ಮೊಬೈಲ್ಸ್ ಈ ತ್ರಿಚಕ್ರವಾಹನಗಳನ್ನು ಸಿದ್ಧಪಡಿಸಿದೆ.

ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಬೆಳಗಾವಿಯಲ್ಲಿ ಮೊದಲಬಾರಿ ಇಂತಹ ತ್ರಿಚಕ್ರ ಆಟೋ ಪ್ರಾಯೋಗಿಕವಾಗಿ ಪರಿಚಯಿಸಲಾಗುತ್ತಿದೆ. ಮಹಿಳೆಯರ ಸಬಲೀಕರಣಕ್ಕೆ ಮತ್ತು ಆರ್ಥಿಕಮಟ್ಟವನ್ನು ಸುಧಾರಿಸಲು ಈ ವಾಹನಗಳು ಸಹಕಾರಿಯಾಗಿವೆ. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಸುಮಾರು 50 ತ್ರಿಚಕ್ರವಾಹನಗಳ ಬಳಕೆ ಅವಶ್ಯಕವಾಗಿದ್ದು, ಮೊದಲ ಹಂತದಲ್ಲಿ 25 ಜನರಿಗೆ ವಿತರಿಸುವ ಉದ್ಧೇಶ ಹೊಂದಲಾಗಿದೆ ಎಂದರು.
ಇನ್ನು ತ್ರಿಚಕ್ರವಾಹನ ಸಿದ್ಧಪಡಿಸಿದ ಪ್ರಜ್ಞಾ ಆಟೋ ಮೊಬೈಲ್ಸನ ಪ್ರಮುಖರು ಮಾತನಾಡಿ ಪರಿಸರ ರಕ್ಷಣೆಯ ಜೊತೆಗೆ ಹಣದ ಉಳಿತಾಯಕ್ಕಾಗಿ ಈ ತ್ರಿಚಕ್ರವಾಹನಗಳನ್ನು ಸಿದ್ಧಪಡಿಸಲಾಗಿದೆ. ಸುಮಾರು 4 ಜನರು ಇದರಲ್ಲಿ ಪ್ರಯಾಣಿಸಬಹುದು. ದಿನಕ್ಕೆ 5 ಗಂಟೆ ಚಾರ್ಜ್ ಮಾಡಿದರೇ ಸಾಕು. 100 ಕಿಲೋ ಮೀಟರ್ ಪ್ರಯಾಣಿಸಬಹುದು. 1 ಲಕ್ಷ 40 ಸಾವಿರ ಮತ್ತು 1 ಲಕ್ಷ 70 ಸಾವಿರ ರೂಪಾಯಿ ಬೆಲೆಯಲ್ಲಿ ಈ ವಾಹನಗಳು ಲಭ್ಯ ಇರುವುದಾಗಿ ಹೆಚ್ಚಿನ ಮಾಹಿತಿಯನ್ನು ನೀಡಿದರು.

ಒಟ್ಟಿನಲ್ಲಿ ಸ್ಮಾರ್ಟ್ ಸಿಟಿ ಬೆಳಗಾವಿಗೆ ಹೊಸ ವಾಹನಗಳು ಲಗ್ಗೆ ಇಡುತ್ತಿದ್ದು, ಪರಿಸರ ಮಾಲಿನ್ಯ ತಡೆಯೊಂದಿಗೆ ಮಹಿಳೆಯ ಆರ್ಥಿಕಮಟ್ಟವನ್ನು ಸುಧಾರಿಸಲು ಮುಂದಾಗಿವೆ.

Tags:

error: Content is protected !!