Belagavi

ಭಾರತ್ ವಿಕಾಸ್ ಪರಿಷತ್ ವತಿಯಿಂದ ಅಂತರಶಾಲಾ “ಭಾರತ್ ಕೋ ಜಾನೋ” ರಸಪ್ರಶ್ನೆ ಸ್ಪರ್ಧೆ

Share

ಬೆಳಗಾವಿ : ಭಾರತ್ ವಿಕಾಸ್ ಪರಿಷತ್ ಆಯೋಜಿಸಿದ್ದ ಆಂತರಶಾಲಾ “ಭಾರತ್ ಕೋ ಜಾನೋ” ರಸಪ್ರಶ್ನೆ ಸ್ಪರ್ಧೆಯನ್ನು ಜಿಜಿಸಿ ಸಭಾಂಗಣದಲ್ಲಿ ಅತ್ಯಂತ ಉತ್ಸಾಹದಿಂದ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಪ್ರಾಚಾರ್ಯ ವಿ. ಎನ್. ಜೋಶಿ ಉಪಸ್ಥಿತರಿದ್ದರು. ಗಣ್ಯರು ಭಾರತಮಾತೆ ಹಾಗೂ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗಿಸಿದರು.

ಸಂಗೀತಾ ತಿಗಡಿ- ನಾಡಗೀರ್ ಸಂಪೂರ್ಣ ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಭಾರತ ವಿಕಾಸ್ ಪರಿಷತ್ ಅಧ್ಯಕ್ಷ ವಿನಾಯಕ ಮೋರೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪಾಂಡುರಂಗ ನಾಯಕ ಅವರು ಭಾರತ ವಿಕಾಸ ಪರಿಷತ್ತಿನ ರಾಷ್ಟ್ರೀಯ ಯೋಜನೆಗಳು ಮತ್ತು ಕಾರ್ಯಗಳ ಬಗ್ಗೆ ತಿಳಿಸಿದರು. ಡಾ. ವಿ. ಬಿ. ಯಲಬುರ್ಗಿ ಅವರು ಸ್ಪರ್ಧೆಯ ಕುರಿತು ವಿವರಿಸಿದರು. ಪ್ರೊ. ಅರುಣಾ ನಾಇಕ ಸ್ಪರ್ಧೆಯ ನಿಯಮಗಳು ಮತ್ತು ಷರತ್ತುಗಳನ್ನು ವಿವರಿಸಿದರು. ಸ್ಪರ್ಧೆಯ ಸಂಯೋಜಕರಾದ ಡಾ. ಜೆ. ಜಿ. ನಾಇಕ ಅವರು ರಸಪ್ರಶ್ನೆ ಸ್ಪರ್ಧೆಯನ್ನು ಅದ್ಭುತವಾಗಿ ನಡೆಸಿಕೊಟ್ಟರು. ಸ್ಕೋರರ್‌ಗಳಾಗಿ ಸುಹಾಸ ಗುರ್ಜರ್ ಮತ್ತು ಸುಭಾಷ್ ಮಿರಾಶಿ ಕಾರ್ಯ ನಿರ್ವಹಿಸಿದರು.

ಸ್ಪರ್ಧೆಯಲ್ಲಿ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆ ಗಣೇಶಪುರ ಪ್ರಥಮ, ಅಮೃತ ವಿದ್ಯಾಲಯ ದ್ವಿತೀಯ, ಬಾಲಿಕಾ ಆದರ್ಶ ವಿದ್ಯಾಲಯ ತೃತೀಯ ಸ್ಥಾನ ಪಡೆಯಿತು. ವಿಶೇಷ ಬಹುಮಾನ ಕೆ. ಎಲ್. ಎಸ್. ಸ್ಕೂಲ ಮತ್ತು ಬಿ. ಕೆ. ಮಾಡೆಲ್ ಶಾಲೆಗೆ ನೀಡಲಾಯಿತು. ಸೆ. 22ರಂದು ಗಂಗಾವತಿಯಲ್ಲಿ ನಡೆಯುವ ಪ್ರಾಂತೀಯ ಮಟ್ಟದ ಸ್ಪರ್ಧೆಗೆ ಪ್ರಥಮ ಸ್ಥಾನ ಪಡೆದ ತಂಡವನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮವನ್ನು ಸ್ವಾತಿ ಘೋಡೇಕರ್ ಸುಂದರವಾಗಿ ನಿರೋಪಣೆ ಮಾಡಿದರು. ಕಾರ್ಯದರ್ಶಿ ಕೆ. ವಿ. ಪ್ರಭೂ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಕಾರ್ಯಕ್ರಮದಲ್ಲಿ ನಾಮಜಿ ದೇಶಪಾಂಡೆ, ವಿನಾಯಕ ಘೋಡೆಕರ, ಸುಹಾಸ ಸಂಗಲೀಕರ, ರಾಮಚಂದ್ರ ತಿಗಡಿ, ವಿ. ಆರ್. ಗುಡಿ, ಕ್ಯಾ. ಪ್ರಾಣೇಶ ಕುಲಕರ್ಣಿ, ಡಿ. ವೈ. ಪಾಟೀಲ, ಪಿ. ಎಂ. ಪಾಟೀಲ, ಚಂದ್ರಶೇಖರ್ ಈಟಿ, ವಿಜಯ ಹಿಡದುಗ್ಗಿ, ಲಕ್ಷ್ಮೀ ತಿಗಡಿ, ಉಮಾ ಯಲಬುರ್ಗಿ, ಜಯಾ ನಾಯಕ, ಶುಭಾಂಗಿ ಮಿರಾಶಿ, ವಿದ್ಯಾ ಈಟಿ, ಪ್ರಿಯಾ ಪಾಟೀಲ, ಜ್ಯೋತಿ ಪ್ರಭು, ಅಕ್ಷತಾ ಮೋರೆ, ಜ್ಯೋತ್ಸ್ನಾ ಗಿಲಬಿಲೆ, ಭಾರತ ವಿಕಾಸ ಪರಿಷತ್ತಿನ ಸರ್ವ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳೊಂದಿಗೆ ಅಧ್ಯಕ್ಷ ವಿನಾಯಕ ಮೋರೆ, ಪ್ರಾಚಾರ್ಯ ವಿ. ಎನ್. ಜೋಶಿ, ಡಾ. ವಿ. ಬಿ. ಯಲಬುರ್ಗಿ, ಪಾಂಡುರಂಗ ನಾಯಕ್, ಡಾ. ಜೆ. ಜಿ. ನಾಇಕ, ಅರುಣಾ ನಾಇಕ, ಸ್ವಾತಿ ಘೋಡೇಕರ, ನಾಮಜೆ ದೇಶಪಾಂಡೆ, ಕೆ. ವಿ. ಪ್ರಭೂ ಹಾಗೂ ಭಾರತ್ ವಿಕಾಸ ಪರಿಷತ್ತಿನ್ ಪದಾಧಿಕಾರಿಗಳು.

Tags:

error: Content is protected !!