Belagavi

ನೀರಿನಲ್ಲಿ ಹೋಮ ಮಾಡಿದಂತಾಯ್ತು ಗೆಣಸು ಬೆಳೆಗಾರನ ಶ್ರಮ… ಗೆಣಸು ಬೆಳೆಗಾರನಿಗೆ ಗಂಡಾತರವಾದ ಅತಿವೃಷ್ಠಿ

Share

ಅತಿವೃಷ್ಠಿ ಮತ್ತು ಅನಾವೃಷ್ಠಿ ಎರಡು ರೈತರ ಬಾಂಧವರನ್ನ ಕಂಗಾಲಾಗಿಸಿ ಬಿಡುತ್ತೆ. ಪಟ್ಟ ಶ್ರಮ ನೀರಿನಲ್ಲಿ ಹೋಮವಾಗಿ ಬಿಡುತ್ತೆ. ಇದೇ ಪರಿಸ್ಥಿತಿ ಈಗ ಗೆಣಸು ಬೆಳೆಗಾರರಿಗೆ ಬಂದಿದ್ದು, ತೊಂದರೆಗಿಡಾಗಿದ್ದಾರೆ.

ಕಳೆದ ಬಾರಿ ಅನಾವೃಷ್ಠಿಗೆ ಬೇಸತ್ತಿದ್ದ ಅನ್ನದಾತ ಈ ಬಾರಿ ಮಳೆಗಾಲ ಆರಂಭವಾಗುತ್ತಿದ್ದಂತೆ ಹರ್ಷಿತನಾಗಿದ್ದ. ಆದರೇ ಸಮರ್ಪಕ ಮಳೆ ಬಿದ್ದ ನಂತರವೂ ವರುಣರಾಯ ತನ್ನ ರೌದ್ರರೂಪವನ್ನು ತೋರಿಸಿಬಿಟ್ಟ. ಇದರಿಂದಾಗಿ ಸಮೃದ್ಧವಾಗಿ ಬೆಳೆದ ಬೆಳೆಯೂ ಕೂಡ ನೀರಿನಲ್ಲಿ ಮುಳುಗಿ ಹೋಯಿತು. ಬೆಳಗಾವಿಯಲ್ಲಿಯೂ ಅದೇ ಪರಿಸ್ಥಿತಿ ಎದುರಾಗಿದೆ. ಕಷ್ಟಪಟ್ಟು ಬೇವರು ಸುರಿಸಿ ಬೆಳೆದ ಕಂದಮೂಲ ಗೆಣಸು ಅತಿವೃಷ್ಠಿಯಿಂದ ಹಾಳಾಗಿದ್ದು, ಮಾರುಕಟ್ಟೆಯಲ್ಲಿ ತಮ್ಮ ಬೆಲೆಯನ್ನು ಹೆಚ್ಚಿಸಿಕೊಂಡಿದೆ.

ಸಾಲಸೂಲ ಮಾಡಿ ಬೆಳೆದ ಬೆಳೆ ಕೈ ಸೇರದೇ ಅನ್ನದಾತ ತಲೆಯ ಮೇಲೆ ಕೈಹೊತ್ತುಕೊಂಡು ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ. ಬೆಳೆದ ಬೆಳೆಯಲ್ಲಿ ಮೂಕ್ಕಾಲು ಭಾಗ ಹಾಳಾಗಿ ಹೋಗಿದೆ. ಕೇವಲ ಶೇ 25 ರಷ್ಟು ಮಾತ್ರ ಬೆಳೆ ಬಂದಿದೆ. ಇಳುವರಿಗೆ ವ್ಯಯಿಸಿದ ಹಣ ಕೂಡ ಮರಳಿ ಕೈ ಸೇರದಾಗಿದೆ. ಕಳೆದ ಬಾರಿಯ ತುಲನೆಗೆ ಈ ಬಾರಿ ಬಹಳಷ್ಟು ಕಡಿಮೆ ಇಳುವರಿಯಾಗಿದೆ. ಇದರಿಂದ ಕಂಗಾಲಾದ ರೈತ ರಘು ಜಾಧವ ಹೇಳಿದ್ದು ಹೀಗೆ.

ಮೊದಲೂ ಅನಾವೃಷ್ಟಿ ನಂತರ ಅತಿವೃಷ್ಠಿ ಇದರಿಂದಾಗಿ ಇಳುವರಿ ಕಾಣದೇ ಅನ್ನದಾತ ಸಂಕಷ್ಟಕ್ಕೇ ಸಿಲುಕಿದ್ದಂತೂ ಮಾತ್ರ ಸತ್ಯ.

Tags:

error: Content is protected !!