Belagavi

ನಾಳೆ ಬೆಳಗಾವಿಯಲ್ಲಿ ಈದ್ ಮಿಲಾದ್ ಮೆರವಣಿಗೆ ; ಶಾಂತಿ ಕದಡಲು ಪ್ರಯತ್ನಿಸಿದರೇ ಕಠಿಣ ಕ್ರಮ ; ಪೊಲೀಸ್ ಆಯುಕ್ತ ಯಡಾ ಮಾರ್ಟೀನ್

Share

ಈದ್ ಮಿಲಾದ್ ಮೆರವಣಿಗೆಯೂ ನಾಳೆ ಸೆಪ್ಟೆಂಬರ್ 21 ರಂದು ಭಾನುವಾರ ನಡೆಯಲಿದ್ದು, ಬೆಳಗಾವಿ ನಗರದಲ್ಲಿ ಪೊಲೀಸ್ ಇಲಾಖೆಯಿಂದ ಖಡಕ್ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಶಾಂತಿ ಕದಡಲು ಪ್ರಯತ್ನಿಸಿದರೇ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತರಾದ ಯಡಾ ಮಾರ್ಟೀನ್ ಹೇಳಿದರು.

ಅವರು ಇಂದು ಬೆಳಗಾವಿ ನಗರದಲ್ಲಿ ಕರೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು. ಗಣೇಶೋತ್ಸವ ಇದ್ದ ಹಿನ್ನೆಲೆ ಈದ್ ಮಿಲಾದ್ ಮೆರವಣಿಗೆಯನ್ನು ಬೆಳಗಾವಿಯ ಮುಸ್ಲಿಂ ಸಮಾಜವು ಮೂಂದೂಡಿತ್ತು. ನಾಳೆ ಸೆಪ್ಟೆಂಬರ್ 22 ರಂದು ಭಾನುವಾರ ನಗರದಲ್ಲಿ ಈದ್ ಮಿಲಾದ್ ಮೆರವಣಿಗೆ ನಡೆಯಲಿದೆ. ಈಗಾಗಲೇ ಶಾಂತಿಸಭೆಯನ್ನು ನಡೆಸಿ ಚರ್ಚಿಸಲಾಗಿದೆ. ಅವರಿಗೆ ಬೇಕಾದ ಸ್ಪಂದನೆಯ ಕುರಿತು ಸಭೆಯಲ್ಲಿ ಚರ್ಚಿಸಲಾಗಿದ್ದು, ಶಾಂತಿಪೂರ್ಣವಾಗಿ ಮೆರವಣಿಗೆಯನ್ನು ನಡೆಸಲು ಸೂಚಿಸಲಾಗಿದೆ. ಇಂದು ಮತ್ತೇ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಂತಿ ಸಭೆಯನ್ನು ನಡೆಸಲಾಗುತ್ತಿದೆ. ನಗರದಲ್ಲಿ ಯಾವ ರೀತಿ ಗಣೇಶೋತ್ಸವ ಶಾಂತಿಯುತವಾಗಿ ಸಂಪತನ್ನಗೊಂಡಿದೆಯೋ ಅದೇ ರೀತಿ ಈದ್ ಮಿಲಾದ್ ಮೆರವಣಿಗೆ ಕೂಡ ಶಾಂತಿಯುವಾಗಿ ನಡೆಯುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಇನ್ನು ಈಗಾಗಲೇ ಅಹಿತಕರ ಘಟನೆಗಳನ್ನು ತಡೆಯಲು ಪೊಲೀಸ್ ಇಲಾಖೆ ಸಜ್ಜಾಗಿದೆ. ಹೆಚ್ಚುವರಿ ಅಧಿಕಾರಿಗಳನ್ನು ಬಳಸಿ ಭದ್ರತೆಯನ್ನು ಒದಗಿಸಲಾಗುತ್ತಿದೆ. ಗನ್ ಬಸ್, ಕೆಎಸಆರಪಿ, ಸಿಎಸಎಫ್,ಆರಎಫಎಸ್, ಸಿಪಿಐ, ಎಸಿಪಿಗಳು, ಇನ್ಸಪೇಕ್ಟರಗಳು, ಪೊಲೀಸ್ ಪೇದೆಗಳು, ಹೋಂ ಗಾರ್ಡ್ ಸೇರಿದಂತೆ ಇನ್ನುಳಿದ ಸಿಬ್ಬಂದಿಗಳಿಂದ ಖಡಕ್ ಬಂದೋಬಸ್ತ್ ನಿಯೋಜಿಸಲಾಗಿದೆ. ಶಾಂತಿ ಕದಡಲು ಪ್ರಯತ್ನಿಸಿದರೇ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಅವರು ಮಾಹಿತಿಯನ್ನು ನೀಡಿದರು.

Tags:

error: Content is protected !!