Belagavi

ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ

Share

ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, Diftech Technologies ಹಾಗೂ Spray Engineering devices. ಇವರ ಸಹಭಾಗಿತ್ವದಲ್ಲಿ Implementation of Efficient Process House Equipments & Refinery Process by Phosplotation / Carbonation Followed by IER ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ನಿರ್ದೇಶಕರಾದ ಸಿ. ಬಿ. ಪಾಟೀಲ ಇವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು ಆವರು ತಮ್ಮ ಭಾಷಣದಲ್ಲಿ ಎಸ್.ನಿಜಲಿಂಗಪ್ಪ ಸಂಸ್ಥೆಯು ಸಕ್ಕರೆ ಕಾರ್ಖಾನೆಗಳಿಗೆ ಉತ್ತಮ ಕಾರ್ಯ ದಕ್ಷತೆಯಿಂದ ಕಾರ್ಯನಿರ್ವಹಿಸಿ ಉತ್ತಮ ಗುಣಮಟ್ಟದ ಸಕ್ಕರೆ ಉತ್ಪಾದಿಸಲು ನಿರಂತರವಾಗಿ ಕಾರ್ಯಗಾರ ಹಾಗೂ ವಿಚಾರಸಂಕೀರ್ಣಗಳನ್ನು ಅಯೋಜಿಸುತ್ತಿರುತ್ತದೆ. ಕಳೆದ ಕೆಲವು ದಶಕಗಳಿಂದ ಕಾರ್ಖಾನೆಗಳಲ್ಲಿ ಸ್ಟಿಮ (ಹವೆ) ವಳಗೆ ೪೫% ದಿಂದ ೩೦% ಹಾಗೂ ಉತ್ಪನ್ನಗಳಲ್ಲಿ ಸಕ್ಕರೆ ನಷ್ಟು ೨.೨ ದಿಂದ ೧.೮ ಹಾಗೂ ಸಕ್ಕರೆಯ ICUMSA ಮತ್ತು ೪೫IU ಕ್ಕಿಂತ ಕಡಿಮೆ ಆಗಿರುವ ಒಂದು ಉತ್ತಮ ಸಾಧನೆ ಸಕ್ಕರೆ ಉತ್ಪಾದನಾ ಕ್ಷೇತ್ರದಲ್ಲಿ ಹಲವು ಆಧುನಿಕ ತಂತ್ರಜ್ಞಾನದ ಆವಿಷ್ಕಾರವಾಗುತ್ತಿದ್ದು ಇವುಗಳ ಸರಿಯಾದ ಬಳಕೆ ಮಾಡುವುದರಿಂದ ಕಾರ್ಖಾನೆಗಳು ಇನ್ನಷ್ಟು ಉತ್ತಮ ಕಾರ್ಯದಕ್ಷತೆಯಿಂದ ಕಾರ್ಯನಿರ್ವಹಿಸಬೇಕೆಂದು ತಮ್ಮ ಭಾಷಣದಲ್ಲಿ ತಿಳಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಜಯೆಂದ್ರ ಸಿಂಗ್ ಕಾರ್ಯನಿರ್ವಾಹಕ ನಿರ್ದೇಶಕರು ಶ್ರೀ. ರೇಣುಕಾ ಶುಗರ್ಸ ಲಿ. ಇವರು ತಮ್ಮ ಭಾಷಣದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಸಕ್ಕರೆ ಕಾರ್ಖಾನೆಗಳ ಪಾತ್ರ ಬಹಳ ಪ್ರಮುಖವಾಗಿದ್ದು. ಕಾರ್ಖಾನೆಗಳು ಉತ್ತಮ ಆಧುನಿಕ ತಂತ್ರಜ್ಞಾನ, ಕೌಶಲ್ಯತೆಯ ಮಾನವ ಸಂಪನ್ಮೂಲಗಳ ಬಳಕೆಯಿಂದ ಉತ್ತಮವಾಗಿ ಪ್ರಗತಿ ಸಾಧಿಸ ಬುಹುದೆಂದು ತಿಳಿಸಿದರು.ಕಾರ್ಯಕ್ರಮ ತಾಂತ್ರಿಕ ಅಧಿವೇಶನದಲ್ಲಿ ಸಕ್ಕರೆ ಗುಣಮಟ್ಟವನ್ನು ಹೆಚ್ಚಿಸಲು ಹಾಗೂ ಸಂಸ್ಕರಿಸಿದ ಸಕ್ಕರೆ ಉತ್ಪಾದನೆಯಲ್ಲಿ ಬಳಸುವ ಆಧುನಿಕ ತಂತ್ರಜ್ಞಾನಗಳ ಕುರಿತು ಸುಮಾರು ೯ ತಾಂತ್ರಿಕ ಲೇಖನಗಳನ್ನು ಮಂಡಿಸಲಾಯಿತು.

ಕಾರ್ಯಕ್ರಮಲ್ಲಿ. ಆರ್. ವಿ, ವಾಟ್ನಾಳ, ವಿವೇಕ ವರ್ಮಾ, ಡಾ. ಎಮ್. ಬಿ. ಲೋಂಡೆ, ವಿ. ಕೆ. ರಾಟೆ, ಜೀತೆಂದ್ರ ಚವ್ಹಾನ, ಹಾಗೂ ವಿಕ್ರಮ ಸಿಂಗ್ ಶಿಂಧೆ. ವೇದಿಕೆಯ ಮೇಲೆ ಉಪಸ್ಥಿತರಿದ್ದರು.ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ಗುಜರಾತ ರಾಜ್ಯಗಳಿಂದ ಸುಮಾರು ೧೮೦ಕ್ಕೂ ಹೆಚ್ಚು ಕಾರ್ಖಾನೆಗಳ ತಾಂತ್ರಿಕ ಸಿಬ್ಭಂದಿಗಳು ವಿಚಾರಸಂಕೀರ್ಣದಲ್ಲಿ ಭಾಗವಹಿಸಿದ್ದರು.

Tags:

error: Content is protected !!