ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದಲ್ಲಿ ಉತ್ಸಾಹದಿಂದ ಮೋಹರಂ ಹಬ್ಬವನ್ನು ಆಚರಿಸಲಾಯಿತು.

ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದಲ್ಲಿ ಇಂದು ಅತ್ಯಂತ ಉತ್ಸಾಹದಿಂದ ಮೋಹರಂ ಹಬ್ಬವನ್ನು ಆಚರಿಸಲಾಯಿತು. ಕಳೆದ ದಿನಗಳಲ್ಲಿ ಗ್ರಾಮದಲ್ಲಿ ಸ್ಥಾಪಿಸಲಾಗಿದ್ದ, ತಾಬೂತು ಮತ್ತು ಪಂಜಾಗಳ ಮೆರವಣಿಗೆ ನಡೆಸಲಾಯಿತು. ಮಳೆಯಲ್ಲಿ ಕೊಡೆಯನ್ನು ಹಿಡಿದು, ಕನ್ನಡ ಬಾವುಟದೊಂದಿಗೆ ಹೆಜ್ಜೆ ಹಾಕಿದ್ದು, ಆಕರ್ಷಕವಾಗಿತ್ತು.
