Vijaypura

ಡಿಸೆಂಬರ್ 22 ರಂದು ವಿಜಯಪುರದಲ್ಲಿ ವೃಕ್ಷೋತ್ಥಾನ್ ಹೆರಿಟೇಜ್ ರನ್

Share

ಈ ಬಾರಿ ವೃಕ್ಷೋತ್ಥಾನ್ ಹೆರಿಟೇಜ್ ರನ್ ಮುಂಬರುವ ಡಿಸೆಂಬರ್ 22 ರಂದು ನಗರದಲ್ಲಿ ನಡೆಯಲಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

ವಿಜಯಪುರ ನಗರದಲ್ಲಿ ವೃಕ್ಷೋತ್ಥಾನ್ ಹೆರಿಟೇಜ್ ರನ್-2024 ಸಮಿತಿ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆಯಲಿರುವ ಈ ವರ್ಷದ ವೃಕ್ಷೋಥಾನ್ ಹೆರಿಟೇಜ್ ರನ್-2024 ಪೋಸ್ಟರ್ ನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಕಳೆದ ವರ್ಷ ನಡೆದ ಮ್ಯಾರಾಥಾನ್ ನಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಪಾಲ್ಗೋಂಡಿದ್ದರು. ಈ ಬಾರಿ ಸುಮಾರು 15 ಸಾವಿರಕ್ಕೂ ಹೆಚ್ಚು ಜನ ಪಾಲ್ಗೋಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಕಳೆದ ಬಾರಿ ನಡೆದ ಮ್ಯಾರಾಥಾನ್ ನಿಂದಾಗಿ ದೇಶಾದ್ಯಂತ ವಿಜಯಪುರ ಜಿಲ್ಲೆ ಮತ್ತು ಇಲ್ಲಿರುವ ಪ್ರಾಚೀನ ಸ್ಮಾರಕಗಳು ಹಾಗೂ ಇಲ್ಲಿನ ಆಯೋಜನೆ ಗಮನ ಸೆಳೆದಿದ್ದು, ಎಲ್ಲರಿಂದಲೂ ಶ್ಲಾಘನೆ ವ್ಯಕ್ತವಾಗಿದೆ.

ಈ ಬಾರಿ ಮತ್ತಷ್ಟು ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳುವವರು ಈಗಿನಿಂದಲೇ ತಯಾರಿ ಆರಂಭಿಸಬೇಕು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ವೃಕ್ಷೋತ್ಥಾನ್ ಹೆರಿಟೇಜ್ ರನ್-2024 ಸಮಿತಿಯ ಪದಾಧಿಕಾರಿಗಳಾದ ಕೋಟಿವೃಕ್ಷ ಅಭಿಯಾನ ಸಂಚಾಲಕ ಡಾ. ಮುರುಗೇಶ ಪಟ್ಟಣಶೆಟ್ಟಿ, ಕೈಗಾರಿಕೆ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ, ಶಿವನಗೌಡ ಪಾಟಿಲ, ಸೋಮಶೇಖರ ಸ್ವಾಮಿ, ಸಂಕೇತ ಬಗಲಿ, ಸಂತೋಷ ಔರಸಂಗ, ವೀರೇಂದ್ರ ಗುಚ್ಚೆಟ್ಟಿ, ಡಾ. ರಾಜು ಯಲಗೊಂಡ, ಅಪ್ಪು ಭೈರಗೊಂಡ, ಚಂದ್ರಶೇಖರ ಶೆಟ್ಟಿ, ಅಮಿತ ಬಿರಾದಾರ, ನವೀದ ನಾಗಠಾಣ, ಆಕಾಶ ಚೌಕಿಮಠ, ಶಿವಾನಂದ ಯರನಾಳ, ಸೋಮು ಮಠ, ಸಮೀರ ಬಳಗಾರ, ಡಾ. ಪ್ರವೀಣ ಚೌರ ಮುಂತಾದವರು ಉಪಸ್ಥಿತರಿದ್ದರು.

Tags:

error: Content is protected !!