Belagavi

‘ವೆಲಕಮ್’ ಮೂಲಕ ಆತಿಥ್ಯ ನೀಡಲು ಮುಂದಾದ ಜೊಲ್ಲೆ ಉದ್ಯೋಗ ಸಮೂಹ

Share

ಎರಡನೇ ರಾಜಧಾನಿ ಎಂದೇ ಖ್ಯಾತಿ ಪಡೆದ ಬೆಳಗಾವಿ ನಗರದಲ್ಲಿ ಪ್ರವಾಸಿಗರಿಗೆ ಆಧುನಿಕ ಸೌಕರ್ಯಗಳೊಂದಿಗೆ ಉತ್ತಮ ಆತಿಥ್ಯ ನೀಡಲು ಜೊಲ್ಲೆ ಗ್ರುಪ್ ದಾಪುಗಳನ್ನು ಇಟ್ಟಿದ್ದು, ಇಂದಿನಿಂದ ವೆಲಕಮ್ ಐ.ಟಿ.ಸಿ ಹೋಟೆಲ್ ತನ್ನ ಕಾರ್ಯಾರಂಭವನ್ನು ಮಾಡಿದೆ. ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಸಮೀಪ 5 ಎಕರೆ ವಿಶಾಲವಾದ ಪ್ರದೇಶದಲ್ಲಿ ಜೊಲ್ಲೆ ಗ್ರುಪನ ಬಸವಪ್ರಸಾದ ಜೊಲ್ಲೆ ಅವರ ನೇತೃತ್ವದಲ್ಲಿ ವೆಲಕಮ್ ಐ.ಟಿ.ಸಿ ಹೋಟೆಲ್ ನಿರ್ಮಿಸಲಾಗಿದ್ದು, ಇಂದು ಸಡಗರ-ಸಂಭ್ರಮದಿಂದ ಉದ್ಘಾಟನಾ ಸಮಾರಂಭ ನೆರವೇರಿತು.

ಶರವೇಗದಲ್ಲಿ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿರುವ ಬೆಳಗಾವಿ ಮೂರು ರಾಜ್ಯಗಳ ಕೇಂದ್ರ ಬಿಂದು. ಅನೇಕ ಶ್ರದ್ಧಾಸ್ಥಾನ, ಐತಿಹಾಸಿಕ ಸ್ಥಳಗಳನ್ನು ಹೊಂದಿದ ಬೆಳಗಾವಿ ವ್ಯಾಪಾರ ಕೇಂದ್ರವು ಹೌದು. ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯವನ್ನು ಸಂಪರ್ಕಿಸುವ ಬೆಳಗಾವಿಗೆ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಬೇರೆಯಿಂದ ಪ್ರವಾಸಿಗರು ಆಗಮಿಸುತ್ತಾರೆ. ಜೊಲ್ಲೆ ಗ್ರುಪ್ ಐ.ಟಿ.ಸಿ ಯೊಂದಿಗೆ ಕೈಜೋಡಿಸಿ, ವೆಲಕಮ್ ಹೋಟೆಲ್ ಮೂಲಕ ಪ್ರವಾಸಿಗರನ್ನು ಸ್ವಾಗತಿಸಿ ಆತಿಥ್ಯ ನೀಡಲೂ ಸಜ್ಜಾಗಿದೆ. ಆಧುನಿಕತೆಗಳಿಂದ ಭರಿತವಾದ ಈ ಹೋಟೆಲ್ ವಿಮಾನ ನಿಲ್ದಾಣಕ್ಕೆ ಸಮೀಪ ಮತ್ತು ಪ್ರವಾಸಿಗರಿಗೆ ಸಕಲ ಸೇವೆಗಳನ್ನು ಒದಗಿಸಲಿದೆ ಎಂದು ಜೊಲ್ಲೆ ಗ್ರುಪನ ಎಂ.ಡಿ.ಬಸವಪ್ರಸಾದ್ ಜೊಲ್ಲೆ ತಿಳಿಸಿದರು.

ಬ್ರಿಟಿಷರ ವಿರುದ್ಧ ಪ್ರಪ್ರಥಮವಾಗಿ ಹೋರಾಡಿದ ದಿಟ್ಟ ಧೀಮಂತ ಮಹಿಳೆ ವೀರರಾಣಿ ಕಿತ್ತೂರು ಚೆನ್ನಮ್ಮಳ ಜನ್ಮಭೂಮಿಯಲ್ಲಿ ಜೊಲ್ಲೆ ಗ್ರುಪ್ ತನ್ನ ಸೇವೆಯನ್ನು ಆರಂಭಿಸಿರುವುದು ಸಂತಸ ತಂದಿದೆ. ಬೆಳಗಾವಿ ಅಭಿವೃದ್ಧಿಯಾಗಬೇಕು. ಇಲ್ಲಿನ ಪ್ರವಾಸಿಗರಿಗೆ ಉತ್ತಮ ಸೇವೆ ಸಿಗಬೇಕು. ವ್ಯಾಪಾರ ವಹಿವಾಟು ಹೆಚ್ಚಾಗಬೇಕೆಂಬ ಸದುದ್ಧೇಶದಿಂದ ಜೊಲ್ಲೆ ಗ್ರುಪ್ ಬಸವಪ್ರಸಾದ ಜೊಲ್ಲೆ ನೇತೃತ್ವದಲ್ಲಿ ಐ.ಟಿ.ಸಿ ಹೊಟೇಲ ಸಮೂಹದೊಂದಿಗೆ ಕಾಲಿಟ್ಟಿರುವುದಾಗಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಇನ್ನು ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರು ಕೂಡ ತಮ್ಮ ಸಹಕಾರಿ ಕ್ಷೇತ್ರದಿಂದ ಆರಂಭವಾದ ಪ್ರವಾಸವನ್ನು ಮೆಲುಕು ಹಾಕುತ್ತ, ರಾಜಕೀಯ ಕ್ಷೇತ್ರದ ಬಳಿಕ ಈಗ ಹೋಟೆಲ್ ಸಮೂಹದೊಂದಿಗೆ ಜನಸೇವೆಗೆ ಮುಂದಾಗಿರುವುದಾಗಿ ತಿಳಿಸಿದರು.  ಐ ಟಿ ಸಿ ಮ್ಯಾನೇಜರ್ ರಾಹುಲ್, ಸೇರಿದಂತೆ ಇನ್ನುಳಿದವರು ಈ ವೇಳೆ ಭಾಗಿಯಾಗಿದ್ಧರು.

Tags:

error: Content is protected !!