ಕಾಂಗ್ರೆಸನ ಡಿ.ಎನ್.ಎ ನಲ್ಲಿರುವ ಭ್ರಷ್ಟಾಚಾರವನ್ನು ಮೈಗುಡಿಸಿಕೊಂಡ ಸಿಎಂ ಸಿದ್ಧಿರಾಮಯ್ಯನವರು ಪರಮ ಭ್ರಷ್ಟರಾಗಿ ಹೊರಹೊಮ್ಮಿದ್ದಾರೆ. ಮುಡಾದಲ್ಲಿಯೂ ಇದೇ ನಡೆದಿದೆ. ಮುಡಾ ಮತ್ತು ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿದ್ಧರಾಮಯ್ಯ ನೇರವಾಗಿ ಭಾಗಿಯಾಗಿದ್ದು, ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ, ಸಿಬಿಐ ತನಿಖೆ ಎದುರಿಸಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಸವಾಲು ಹಾಕಿದರು.
ಶಾಸಕ ಅಭಯ ಪಾಟೀಲ ಅವರ ನೇತೃತ್ವದಲ್ಲಿ ಪಾರಸ್ ಸೌಹಾರ್ದ ಕೋ- ಆಪ್ ಸೊಸೈಟಿಯ ಉದ್ಘಾಟನೆಗೆ ಇಂದು ಬೆಳಗಾವಿ ನಗರಕ್ಕೆ ಆಗಮಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರು ಮಾಧ್ಯಮಗಾರರೊಂದಿಗೆ ಮಾತನಾಡಿದರು. ಕರ್ನಾಟಕದಲ್ಲಿ ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿದೆ. ಯಾವುದೇ ರೀತಿಯ ಮುಂದಾಲೋಚನೆ ಇಲ್ಲದೇ ಗ್ಯಾರಂಟಿಗಳನ್ನು ಜಾರಿಗೊಳಿಸಿ ಪರದಾಡುತ್ತಿದೆ. ಕಾಂಗ್ರೆಸನ ಡಿ.ಎನ್.ಎ ನಲ್ಲೇ ಭ್ರಷ್ಟಾಚಾರವಿದೆ. ಮೊದಲಿನಿಂದಲೂ ಭ್ರಷ್ಟಾಚಾರದಂತಹ ಮೊಟ್ಟೆಗಳನ್ನು ಇಟ್ಟು ಅದಕ್ಕೆ ಸದಾಕಾಲ ಕಾವು ಕೊಡುತ್ತಾ ಬಂದಿದೆ. ಮಾಜಿ ಪಿಎಂ ಪಂಡಿತ ನೆಹರು ಕಾಲದಿಂದಲೂ ಭ್ರಷ್ಟಾಚಾರದ ಹಗರಣಗಳು ನಡೆಯುತ್ತಾ ಬಂದಿವೆ.
ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ಧರಾಮಯ್ಯ ಅತ್ಯಂತ ಬಾಲಿಶವಾದ ಹೇಳಿಕೆಯನ್ನು ನೀಡಿ,ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕುತ್ತಿದ್ದಾರೆ. ಹಗರಣ ಅಧಿಕಾರಿಗಳಿಂದಲೇ ಆಗಿದ್ದರೇ ಸಚಿವ ನಾಗೇಂದ್ರ ಅವರಿಂದ ರಾಜೀನಾಮೆ ಪಡೆದಿದ್ದೇಕೆ? ಎಸ್.ಐ.ಟಿ ತನಿಖೆಯಂತಹ ಡ್ರಾಮಾ ಯಾಕೆ ಮಾಡ್ತಿದ್ದೀರಿ? ನೀವು ತಪ್ಪು ಮಾಡಿಲ್ಲವೆಂದರೇ ಸಿಬಿಐ ತನಿಖೆಗೆ ಯಾಕೆ ಹೆದರುತ್ತಿದ್ದೀರಿ?
ಸಿಎಂ ಸಿದ್ಧರಾಮಯ್ಯ ತಮ್ಮ ಸಾರ್ವಜನಿಕ ಬದುಕು ಶುದ್ಧ ಹಸ್ತವಾಗಿದೆ ಎಂದು ಹೇಳುತ್ತೀರಿ? ರ್ಯಾಡೋ ವಾಚ್ ಪ್ರಕರಣ ಏನಾಯ್ತು? ಸಿದ್ಧರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಬಳಿಕ ಅದರ ಡಿ.ಎನ್.ಎ ಯನ್ನು ತಮ್ಮಗಾಗಿಸಿಕೊಂಡಿದ್ದು, ಪರಮ ಭ್ರಷ್ಟರಾಗಿ ಹೊರಹೊಮ್ಮಿದ್ದಾರೆ. ಮುಡಾದಲ್ಲಿಯೂ ಇದೇ ನಡೆದಿದೆ. ಮುಡಾ ಮತ್ತು ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿದ್ಧರಾಮಯ್ಯ ನೇರವಾಗಿ ಭಾಗಿಯಾಗಿದ್ದು, ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ, ಸಿಬಿಐ ತನಿಖೆ ಎದುರಿಸಲಿ ಎಂದು ಸವಾಲು ಹಾಕಿದರು.
ರಾಜ್ಯದಲ್ಲಿ ಮಳೆಹಾನಿಯಾದರೂ, ಕಾಂಗ್ರೆಸ್ ಸರ್ಕಾರ ಪರಿಹಾರ ನೀಡುತ್ತಿಲ್ಲ. ಬಿಜೆಪಿ ಸರ್ಕಾರವಿದ್ದಾಗ ಬಿ.ಎಸ್. ಯಡಿಯೂರಪ್ಪನವರು ಪ್ರತಿ ಮನೆಗೆ 5 ಲಕ್ಷ ರೂಪಾಯಿ ಪರಿಹಾರ ನೀಡಿದ್ದರು. ಅದನ್ನು ಕಾಂಗ್ರೆಸ್ 1 ಲಕ್ಷಕ್ಕೇ ಇಳಿಸಿದೆ. ಮಳೆಯಲ್ಲಿ ನೀರು ಹೊಕ್ಕರೇ 10 ಸಾವಿರ ರೂಪಾಯಿ ನೀಡಲಾಗುತ್ತಿತ್ತು ಅದನ್ನು ಕೂಡ 5 ಸಾವಿರಕ್ಕೆ ಇಳಿಸಲಾಗಿದೆ ಎಂದು ಆರೋಪಿಸಿದರು.